ಪ್ರಮುಖ ಸುದ್ದಿವಿನಯ ವಿಶೇಷ
ಜಮ್ಮು-ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ!
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಗಷ್ಟ್ 15 ರ ಸ್ವಾತಂತ್ರ್ಯೋತ್ಸವವನ್ನು ಈಸಲ ಕೆಂಪುಕೋಟೆ ಬದಲು ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಆಚರಿಸಲು ಚಿಂತನೆ ನಡೆಸಿದ್ದಾರೆ. ಕಾಶ್ಮೀರದಲ್ಲೇ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡುವ ಮೂಲಕ ಜಮ್ಮು-ಕಾಶ್ಮೀರ ಭಾರತದ ಮುಕುಟ ಎಂಬ ಸಂದೇಶವನ್ನು ವಿಶ್ವಕ್ಕೆ ರವಾನಿಸುವುದು. ಪಾಕಿಸ್ತಾನ ಮತ್ತು ಪ್ರತ್ಯೇಕತಾವಾದಿಗಳಿಗೆ ಚಳಿ ಬಿಡಿಸಲು ಮೋದಿ ಸರ್ಕಾರ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ.
ಕಣಿವೆ ರಾಜ್ಯದಲ್ಲಿ ಈಗಾಗಲೇ ಭಾರೀ ಸಂಖ್ಯೆಯ ಸೈನ್ಯ ನಿಯೋಜನೆ ಮಾಡಲಾಗಿದ್ದು ಮೋದಿ ಸರ್ಕಾರ ಭಾರೀ ಕುತೂಹಲ ಕೆರಳಿಸಿದೆ. ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಆಚರಣೆ ಸೇರಿದಂತೆ ರಾಜ್ಯ ಚುನಾವಣೆಗೆ ಸಿದ್ಧತೆ, ಕಣಿವೆ ರಾಜ್ಯ ವಿಭಜನೆ, ವಿಶೇಷ ಮಾನ್ಯತೆ ರದ್ದು ಹಾಗೂ ಉಗ್ರ ಸಂಹಾರದ ಯೋಜನೆಯೂ ಇದೆ ಎನ್ನಲಾಗುತ್ತಿದೆ.