ಪ್ರಮುಖ ಸುದ್ದಿ
ಪಾಕ್ ಪ್ರಾಯೋಜಿತ ಭಯೋತ್ಪಾದನೆಗೆ ತಕ್ಕ ಶಿಕ್ಷೆ – ಮೋದಿ
ಪಾಕ್ ಪ್ರಾಯೋಜಿತ ಭಯೋತ್ಪಾದನೆಗೆ ತಕ್ಕ ಶಿಕ್ಷೆ – ಮೋದಿ
ದೆಹಲಿಃ ಮೊದಲು ದೇಶ ರಕ್ಷಣೆಗೆ ಮಾನ್ಯತೆ, ಅದರಂತೆ ಜಮ್ಮು ಕಾಶ್ಮೀರದಲ್ಲಿ 370 ಕಲಂ ರದ್ದುಗೊಳಿಸುವ ಮೂಲಕ ಶಾಂತಿ ನೆಲೆಸುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ರಕ್ಷಣೆ ದೇಶದ ಹಲವು ಕಠಿಣ ಸಮಸ್ಯೆಗಳಿಗೆ ಸೂಕ್ತ ಪರಿಹಾರ, ಮೂಲ ಸೌಕರ್ಯ ಕಲ್ಪಿಸುವದು ಸೇರಿದಂತೆ ಇತರೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ಕಂಗಾಲಾಗಿದೆ. ಪಾಕಿಸ್ತಾನ ದುಸ್ಥಿತಿಗೆ ತಲುಪಿದೆ. ಪಾಕ್ ಪ್ರಾಯೋಜಿತ ಭಯೋತ್ಪಾದನೆಗೆ ತಕ್ಕ ಶಿಕ್ಷೆ ಅನುಭವಿಸುತ್ತಿದೆ. ನಮ್ಮ ದೇಶ ಸಶಕ್ತ, ಸುಭದ್ರವಾಗಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.