ಪ್ರಮುಖ ಸುದ್ದಿ
ಕಾಲಾಳುಪಡೆ ದಿನ ಆಚರಣೆ- ಕೃತಜ್ಞತೆ ವ್ಯಕ್ತಪಡಿಸಿ ಮೋದಿ ಟ್ವಿಟ್
ವಿವಿ ಡೆಸ್ಕ್ಃ ನಮ್ಮ ಕಾಲಾಳುಪಡೆ ಶೌರ್ಯದ ಪ್ರತೀಕ. ಇಂದು ಕಾಲಾಳುಪಡೆ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಪಡೆಯ ಎಲ್ಲರಿಗೂ ನನ್ನ ಹಾರ್ಧಿಕ ಅಭಿನಂದನೆ ಮತ್ತು ಶುಭಾಶಯಗಳು ಎಂದು ದೇಶದ ಪ್ರಧಾನಿ ಮೋದಿಯವರು ಟ್ವಿಟ್ ಮೂಲಕ ತಿಳಿಸಿದ್ದಾರೆ.
ನಮ್ಮ ಕಾಲಾಳುಪಡೆ ಶ್ರದ್ಧೆ ಮತ್ತು ಶೌರ್ಯವನ್ನು ನಿರೂಪಿಸುತ್ತದೆ. ಪ್ರತಿಯೊಬ್ಬ ಭಾರತೀಯರು ನಮ್ಮ ಕಾಲಾಳುಪಡೆಗೆ ಅವರ ಅತ್ಯುತ್ತಮ ಸೇವೆಗಾಗಿ ಕೃತಜ್ಞರಾಗಿರುತ್ತಾರೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ಪ್ರತಿ 27 ಅಕ್ಟೋಬರ್ ಕಾಲಾಳುಪಡೆ (INFANTRY DAY) ದಿನವನ್ನಾಗಿ ಆಚರಿಸಲಾಗುತ್ತಿದೆ.