ಪ್ರಮುಖ ಸುದ್ದಿ

21 ದಿನ ಇಡಿ ದೇಶ ಲಾಕ್ ಡೌನ್ ಕಂಪ್ಲೀಟ್ ಮೋದಿ ಸಂದೇಶ

ಮಧ್ಯರಾತ್ರಿಯಿಂದಲೇ ಇಡಿ ದೇಶ ಲಾಕ್ ಡೌನ್- ಮೋದಿ ಸಂದೇಶ
ವಿವಿ‌ಡೆಸ್ಕ್ಃ ಇಂದು ಮಧ್ಯ ರಾತ್ರಿಯಿಂದ 21 ದಿನ ಇಡಿ ದೇಶ ಲಾಕ್ ಡೌನ್ ಮೋದಿ ಘೋಷಣೆ.

ಇದೊಂದು ಸಾಂಕ್ರಮಿ ವೈರಸ್ ಆಗಿದ್ದು, ದಯಮಾಡಿ‌ ಮೂರು ವಾರಗಳ‌ ಕಾಲ ಯಾರೊಬ್ಬರು ಮನೆಯಿಂದ ಹೊರ ಬರಬೇಡಿ. ಕೊ ಅಂದರೆ ಕೋಯಿ ರೊ ಅಂದ್ರೆ ರೋಡ್ ಪರ್ ನಾ ಅಂದ್ರೆ ನಾಹ‌ ನಿಕಲೆ ಎಂದು ಅರ್ಥೈಸಿದ ಅವರು,

ಕೊರೊನಾ ನಿಯಂತ್ರಣಕ್ಕೆ ಮನೆಯಲ್ಲಿಯೇ ಇರುವದು ಉತ್ತಮ ಮದ್ದು. ಕೊರೊನಾ ವೈರಸ್ ಸಾಂಕ್ರಮಿಕ ಚೈನ್ ಹಾಗಿ‌ ಹಬ್ಬಿದ್ದು, ಅದನ್ನು ಮುರಿಯಬೇಕಿದೆ.

ಆ ಹಿನ್ನರಲೆ ದೇಶದ ಪ್ರತಿಯೊಬ್ಬರ ಉಳಿವಿಗೆ ಈ 21 ದಿನ ಮನೆ ಮುಂದೆ ಒಂದು ಲಕ್ಷ್ಮಣ ರೇಖೆ ಹಾಕಿ ಅದನ್ನು ದಾಟುವ ಪ್ರಯತ್ನ ಮಾಡಬೇಡಿ. ಏನೇ ಆಗಲಿ ಕೆಲಸ್ಥಿತಿಗತಿ ಅರಿತು ನಡೆಯಬೇಕಿದೆ.

ಪ್ರತಿ ಕುಟುಂಬ ಅಪ್ಪ, ಅಮ್ಮ ಮಕ್ಕಳು‌ ಸಹ ಅಂತರ ಕಾಯ್ದುಕೊಳ್ಳಬೇಕು. ದಯಮಾಡಿ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಿ. ಮನುಷ್ಯ‌ ಮನುಷ್ಯರ ನಡುವೆ ಅಂತರ ಅಗತ್ಯ. ಕೊರೊನಾದಿಂದ ಬಚವಾಗಲೂ ಸಾಮಾಜಿಕ ಅಂತರ ಅಗತ್ಯವಿದೆ.

ಏನೇ ಆಗಲಿ ಆದರೆ ಮನೆಯಿಂದ ಹೊರಗಡೆ ಬರುವ ಪ್ರಯತ್ನ ಮಾಡಬೇಡಿ ಎಂದು ಸಂದೇಶವಿತ್ತರು. ಮತ್ತು‌ ಮೊನ್ನೆ ಜನತಾ ಕರ್ಫ್ಯೂಗೆ ಎಲ್ಲಡೆ ಅಭೂತಪೂರ್ವ ಬೆಂಬಲ‌ ದೊರೆತಿದೆ ಅದಕ್ಕೆ ಅಭಿನಂದನೆಗಳು. ಇದು ಇಷ್ಟಕ್ಕೆ‌ ಮುಗಿಯುವದಿಲ್ಲ.

ಕಾರಣ ಇನ್ನೂ ಹೆಚ್ಷಿನ‌ ಜವಬ್ದಾರಿಯಿಂದ ಜನತಾ ಕರ್ಫ್ಯೂಕ್ಕಿಂತ‌ ದೊಡ್ಡ ಹೆಜ್ಜೆ‌ ಮುಂದಿಡಲಾಗಿದೆ. ಕೊರೊನಾ ಸಂಕ್ರಮಣದ ಚೈನ್ ಮುರಿಯಬೇಕಿದೆ. ಕಾರಣ ನಿಮ್ಮ ಸಲುವಾಗಿ‌ ನಿಮ್ಮ ಪರಿವಾರಕ್ಕಾಗಿ ಎಲ್ಲರೂ ನಿಯಮ‌ಗಳನ್ನು ಪಾಲಿಸಿ.‌

ನಿಮಗಾಗಿ ವೈದ್ಯರು, ನರ್ಸ್, ಕಾರ್ಮಿಕರು, ಪೊಲೀಸರು ಸಾಕಷ್ಟು ಜನರು ಜೀವದ ಹಂಗು‌ ತೊರೆದು ಹೋರಾಡುತ್ತಿದ್ದಾರೆ. ಅವರಿಗೆಲ್ಲ ಪ್ರೋತ್ಸಾಹಿಸಲು ನೀವೆಲ್ಲ ಮನೆಯಲ್ಲಿಯೇ ಇದ್ದು ಪ್ರಾರ್ಥಿಸಿ ಅವರಿಗೆ ಶಕ್ತಿ ತುಂಬಿರಿ. ನಿಮಗಾಗಿ ಅವರು ಶ್ರಮಿಸುತ್ತಿದ್ದಾರೆ.

ಕೇವಲ 11 ದಿನದಲ್ಲಿ‌ 2 ಲಕ್ಷ ಜನರಿಗೆ ವೈರಸ್ ಹಬ್ಬುತ್ತಿದೆ. ಆ ಹಿನ್ನೆಲೆ ಈಗಲೇ ನಾವೆಲ್ಲ ಯೋಚಿಸಿದಂತೆ, ಲಾಕ್‌ಡೌನ್ ಅಗತ್ಯವಿದೆ‌. ಏಪ್ರೀಲ್ 14 ರವರೆಗೆ‌ ಸಂಪೂರ್ಣ ದೇಶ‌ ಲಾಕ್ ಡೌನ್ ಹೊಂದಲಿದೆ. ಈ ಮಹಾಮಾರಿ‌ ಕೊರೊನಾ ರೋಗಕ್ಕೆ ಶ್ರೀಮಂತ ದೇಶದಿಂದಲೂ ಔಷಧ ಕಂಡು ಹಿಡಿಯಲು‌ ಆಗಿಲ್ಲ.

ಕೊರೊನಾ ನಿಯಂತ್ರಣ ಕ್ಕೆ 15 ಸಾವಿರ ಕೋಟಿ‌ ಅನುದಾನ ಬಿಡುಗಡೆಗೊಳಿಸಲಾಗಿದ್ದು, ನಿಯಂತ್ರಕ್ಕೆ ಬೇಕಾದ ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ.

ಎಲ್ಲರೂ ಆತ್ಮ ವಿಶ್ವಾಸದೊಂದಿಗೆ ಕಾನೂನು ನಿಯಮ‌ ಪಾಲನೆಯೊಂದಿಗೆ ಎಲ್ಲರೂ ಮನೆಯಲ್ಲಿ‌ ಕುಳಿತು ನಿಭಾಯಿಸಿ. ನಾನು ನಿಮ್ಮ ಮನೆಯ ಸದಸ್ಯನಾಗಿ‌ ಹೇಳುತ್ತಿದ್ದೇನೆ. ಕೈಜೋಡಿಸಿ ಹೇಳುವೆ ಎಲ್ಲರೂ ಮನೆಬಿಟ್ಟು ಹೊರಗಡೆ ಬರಬೇಡಿ‌ ಎಂದು ಸಂದೇಶ ನೀಡಿದರು.

Related Articles

Leave a Reply

Your email address will not be published. Required fields are marked *

Back to top button