ಪ್ರಮುಖ ಸುದ್ದಿ
ಮೋದಿ ಸಂತ್ರಸ್ತರಿಗೆ ಪರಿಹಾರ ನೀಡಿ ಹೃದಯವಂತಿಕೆ ತೋರಲಿ-ಸಿದ್ರಾಮಯ್ಯ
ಚಿಕ್ಕಮಂಗಳೂರಃ ಮೋದಿಯವರು ಎಷ್ಟೆ ಇಂಚಿನ ಎದೆ ಹೊಂದಿರಲಿ, ನೂರು ಇಂಚಿನ ಎದೆಯಾದರೂ ಇಟ್ಟುಕೊಳ್ಳಲಿ. ಮೊದಲು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಹೃದಯವಂತಿಕೆ ತೋರಲಿ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ನೆರೆ ಹಾವಳಿಯಿಂದ ಕಳೆದ 60 ದಿನದಿಂದ ಜನರು ನರಳುತ್ತಿದ್ದಾರೆ. ಇದೀಗ ಕೇವಲ 1200 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಿದ್ದು, ಇದು ಹಿರಿಯರಿಗೆ ಧೂಪ ಹಾಕುವಂತೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರನ್ನು ಅನಿವಾರ್ಯತೆಯಿಂದ ಸಿಎಂ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಅವರಿಗೆ ಸಹಕಾರ ನೀಡುತ್ತಿಲ್ಲ ಇದು ನಾನು ಹೇಳ್ತಿಲ್ಲ ಬಿಜೆಪಿಯ ಶಾಸಕ ಯತ್ನಾಳ ಹೇಳಿರುವದು ಎಂದು ಈ ಸಂದರ್ಭದಲ್ಲಿ ಕುಟುಕಿದರು.