ಪ್ರಮುಖ ಸುದ್ದಿ
‘ಸಿದ್ದರಾಮಯ್ಯ ಸರ್ಕಾರ ಸೀದಾ ರೂಪಯ್ಯ ಸರ್ಕಾರ’ – ಮೋದಿ ಲೇವಡಿ
ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ 10%, 20% ವ್ಯವಹಾರ ನಡೆಯುತ್ತಲೇ ಇದೆ. ಸಿದ್ಧರಾಮಯ್ಯ ಸರ್ಕಾರ ಅಲ್ಲ, ಸೀದಾ ರೂಪಯ್ಯ ಸರ್ಕಾರ ಇದು ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.
ದಾವಣಗೆರೆಯಲ್ಲಿ ನಡೆದ ರೈತಬಂಧು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಕರ್ನಾಟಕ ಸಾಕಷ್ಟು ಅನುದಾನ ನೀಡಿದೆ. ಆದರೆ, ಕೇಂದ್ರ ಸರ್ಕಾರ ನೀಡಿದ 500 ರೂ. ಕೋಟಿ ರೂಪಾಯಿ ಖರ್ಚಾಗದೆ ಉಳಿದಿದೆ ಎಂದರು. ಅಂತೆಯೇ ಇಲ್ಲಿ ಮಂತ್ರಿಗಳ ಮನೆಯಲ್ಲಿ ಬಂಡಲ್ ಬಂಡಲ್ ಹಣ ಸಿಗುತ್ತದೆ, ಡೈರಿ ಸಿಗುತ್ತದೆ. ಅದೆಲ್ಲಾ ಎಲ್ಲಿಂದ ಬರುತ್ತದೆ ಎಂದು ಸಚಿವ ಡಿಕೆಶಿ ವಿರುದ್ಧ ಕುಟುಕಿದರು.