ಪ್ರಮುಖ ಸುದ್ದಿ
ರಾಜಕೀಯ, ಜಲಕಂಟಕ ಕುರಿತು ಸ್ಪೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀ
ಜಲಕಂಟಕ ಕುರಿತು ಸ್ಪೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀ
ವಿವಿ ಡೆಸ್ಕ್ಃ ಸದಾ ಸ್ಪೋಟಕ ಭವಿಷ್ಯ ನುಡಿಯುವ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ, ಇದೀಗ ರಾಜ್ಯ ರಾಜಕಾರಣ ಹಾಗೂ ಸ್ಥಿತಿಗತಿ ಕುರಿತು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಧಾರವಾಡ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಅಲ್ಲದೆ ರಾಜ್ಯದಲ್ಲಿ ಪ್ರಸ್ತುತ ಮಳೆ ಬೆಳೆ ಚನ್ನಾಗಿ ಆಗಲಿದೆ.
ಆದರೆ ಮತ್ತೊಮ್ಮೆ ಜಲಕಂಟಕ ಎದುರಾಗಲಿದೆ. ಕಳೆದ ಬಾರಿಗಿಂತ ಹೆಚ್ಚಿನ ಜಲಕಂಟಕ ಎದುರಿಸಬೇಕಾಗುತ್ತದೆ ಎಂಬ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಯುಗಾದಿ ಬಳಿಕ ಎಲ್ಲದರ ಕುರಿತು ಸ್ಪಷ್ಟ ಭವಿಷ್ಯ ನುಡಿಯುವುದಾಗಿ ತಿಳಿಸಿದ್ದಾರೆ.