ಪ್ರಮುಖ ಸುದ್ದಿ
20/20 ಕ್ರಿಕೆಟ್ ಮ್ಯಾಚಿನಂತೆ ಕುತೂಹಲ ಕೆರಳಿಸಿದ ಗುಜರಾತ್ ಮತ ಎಣಿಕೆ Trend!
ಗುಜರಾತ್ : ಗುಜರಾತ ಚುನಾವಣಾ ಫಲಿತಾಂಶ ದೇಶದ ಜನರ ಗಮನ ಸೆಳೆದಿದೆ. ರಾಜ್ಯದ 182 ಕ್ಷೇತ್ರಗಳ ಮತದಾನ ಎಣಿಕೆ ಕಾರ್ಯಾರಂಭ ಆಗಿದ್ದು ಬಿಜೆಪಿ, ಕಾಂಗ್ರೆಸ್ ಅಬ್ಯರ್ಥಿಗಳ ಮುನ್ನಡೆ, ಹಿನ್ನಡೆ ಫಲಿತಾಂಶ ಹೊರ ಬೀಳುತ್ತಿದೆ. ಆದರೆ, ಮತ ಎಣಿಕೆ ವರದಿ ಹಾವು ಏಣಿ ಆಟದಂತೆ ಸಾಗಿದ್ದು ಭಾರೀ ಕುತೂಹಲ ಕೆರಳಿಸಿದೆ.
ಒಮ್ಮೆ ಬಿಜೆಪಿಗೆ ಸರಳ ಬಹುಮತ ದೊರಕುವ ಲಕ್ಷಣಗಳು ಕಂಡು ಬಂದರೆ ಮತ್ತೊಮ್ಮೆ ಬಿಜೆಪಿ, ಕಾಂಗ್ರೆಸ್ ಸಮಬಲದಲ್ಲಿ ಸಾಗುತ್ತಿವೆ. ಮಗದೊಮ್ಮೆ ಕಾಂಗ್ರೆಸ್ ಪಕ್ಷದ ಅಬ್ಯರ್ಥಿಗಳು ಬಿಜೆಪಿಯನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿರುವುದು ಕಂಡುಬರುತ್ತಿದೆ. ಹೀಗಾಗಿ, ರಾಜಕೀಯ ಪಂಡಿತರು ಗುಜರಾತ್ ಚುನಾವಣಾ ಫಲಿತಾಂಶ ಕುರಿತು ಮಾತನಾಡಲು ತಡಕಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಆದರೆ, 11 ಗಂಟೆ ವೇಳೆಗೆ ಗುಜರಾತಿನ ಸ್ಪಷ್ಟ ಚಿತ್ರಣ ಸಿಗಲಿದೆ.