ಸಿಎಂ, 25 ಬಿಜೆಪಿ ಸಂಸದರು ನಾಮರ್ದರು – ಕಂದಕೂರ
ಸಿಎಂ ಉಕ ಭಾಗದಲ್ಲಿ ಸೀರೆ ತೊಟ್ಟು ಸಂಚರಿಸಲಿ
ಯಾದಗಿರಿಃ ನೆರೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿ ತಿರಸ್ಕೃತಗೊಂಡಿದೆ ಎನ್ನಲಾದ ವಿಷಯಕ್ಕೆ ಸಂಬಧಿಸಿದಂತೆ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯದ 25 ಬಿಜೆಪಿ ಸಂಸದರು ನಾಮರ್ದರು ಎಂದು ಇಲ್ಲಿನ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಟೀಕಿಸಿದ್ದಾರೆ.
ಮುಖ್ಯಮಂತ್ರಿಯವರಿಗೆ ದಹಲಿಯಲ್ಲಿ ಕೆಮ್ಮಲು ಆಗದು ರಾಜ್ಯದಲ್ಲಿ ಬರಿಗೈಲೆ ಸುತ್ತಾಡುತ್ತಿದ್ದಾರೆ ಎಂದ ಅವರು, ಉತ್ತರ ಕರ್ನಾಟಕ ಸಂತ್ರಸ್ತರು ಅಂದಾಜು 60 ದಿನ ಅನುಭವಿಸಿದ ನೋವಿನ ಶಾಪ ನಿಮಗೆ ತಟ್ಟಲಿದೆ.
ಉತ್ತರ ಕರ್ನಾಟಕದಲ್ಲಿ ನೀವು ಬಹಿರಂಗವಾಗಿ ಸಂಚರಿಸಬೇಡಿ ಜನ ನಿಮಗೆ ಚ…ಲಿ ತಗೊಂಡು ಹೊಡೆಯುತ್ತಾರೆ. ಸಿಎಂ ಹಾಗೂ ಬಿಜೆಪಿ ಸಂಸದರು ಹೆಣ್ಣು ಅಲ್ಲ ಗಂಡು ಅಲ್ಲವೆಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಿಎಂ ಹಾಗೂ ಸಂಸದರು ಸೀರೆ ತೊಟ್ಟು ತಿರುಗಲಿ ಎಂದು ಹರಿಹಾಯ್ದರು.
ರಾಜಕೀಯ ಮುನಿಸುಃ ಓರ್ವ ರಾಜ್ಯ ಮುಖ್ಯಮಂತ್ರಿ ಹಾಗೂ 25 ಬಿಜೆಪಿ ಸಂಸದರನ್ನು ಕೈಲಾಗದ ನಾಮರ್ದರು ಎಂದು ಗುರುಮಠಕಲ್ ಕ್ಷೇತ್ರ ಶಾಸಕ ನಾಗಣ್ಣಗೌಡ ಕಂದಕೂರ ಸುಪುತ್ರ ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಹೇಳಿಕೆ ನೀಡಿರುವದು ರಾಜಕೀಯ ನಾಯಕರಲ್ಲಿ ಒಳ ಮುನಿಸಿಗೆ ಕಾರಣವಾಗಿದೆ.
ಮುಂದೆ ಈ ಹೇಳಿಕೆ ಯಾವ ಸ್ವರೂಪ ಪಡೆಯಲಿದೆ ಎಂಬುದು ಕಾದು ನೋಡಬೇಕು. ಆದರೆ ರಾಜಕೀಯ ತಜ್ಞರ ಪ್ರಕಾರ ಯುವ ಮುಖಂಡ ಓರ್ವ ಅನುಭವಿ ಸಿಎಂ, ಸಂಸದರನ್ನು ಈ ರೀತಿಯಾಗಿ ಟೀಕಿಸಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಅವರ ಬೆಳವಣಿಗೆಗೆ ಕುಂದುಂಟು ಮಾಡಲಿದೆ.
ಯುವಕರು ಆದ ಶರಣಗೌಡ ಕಂದಕೂರ ಇನ್ನೂ ರಾಜಕೀಯದಲ್ಲಿ ಬೆಳೆಯಬೇಕಿದೆ. ರಾಜಕೀಯ ತಂತ್ರಗಾರಿಕೆಯ ಹಲವು ರೀತಿಯ ಪಟ್ಟುಗಳನ್ನು ಅವರು ಕಲಿಯಬೇಕಿದೆ. ರಾಜಕೀಯದಲ್ಲಿ ಅವರಿನ್ನು ವಿದ್ಯಾಥಿ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶರಣಗೌಡ ಕಂದಕೂರ ಅವರಿಗೆ ಮುಂದೆ ಉತ್ತಮ ಭವಿಷ್ಯವಿದೆ. ರಾಜಕೀಯ ಭವಿಷ್ಯವನ್ನು ಅವರು ಹಾಳು ಮಾಡಿಕೊಳ್ಳಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.