Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷಸಂಸ್ಕೃತಿ
ಇಂದು ಏಕತೆಯ ಸಂದೇಶ ಸಾರುವ ಮೊಹರಂ ಆಚರಣೆ
ಮುಹರಂ ತಿಂಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುವುದು, ಶೋಕಾಚರಣೆಗಳಲ್ಲಿ ತೊಡಗಿಕೊಳ್ಳೋದು ಮತ್ತು ಸಾರ್ವಜನಿಕ ಆಚರಣೆಗಳನ್ನು ಮಾಡುತ್ತಾರೆ.
ಈ ವೇಳೆ ಆಲಾಯಿ ಕುಣಿತ, ಮುಹರಮ್ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತದೆ. ಮುಹರಮ್ ಹೆಸರಿನಲ್ಲಿ ನಡೆಯುವ ಈ ಎಲ್ಲಾ ಆಚರಣೆಗಳು ಸಾಂಪ್ರದಾಯಿಕವಾಗಿ ನಡೆಸಲ್ಪಡುತ್ತಾ ಬಂದಿದೆ ಹೊರತು ಇದಕ್ಕೆ ಯಾವುದೇ ಧಾರ್ಮಿಕವಾದ ಪುರಾವೆಗಳು ಇಲ್ಲ. ನಮ್ಮ ನಾಡಿನ ಹಲವೆಡೆ ಜಾತಿ ಮತ ಧರ್ಮ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಮುಹರಮ್ ಆಚರಿಸೂದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಒಂದು ಪದ್ಧತಿ ಇದನ್ನು ಶಾಂತಿ ಸೌಹಾರ್ದತೆಯ ಸಂಕೇತ ಎಂದರೂ ತಪ್ಪಾಗಲಾರದು.