ಪ್ರಮುಖ ಸುದ್ದಿ
ಮೋಹರಂಃ ಮೆರವಣಿಗೆಗೆ ಸುಪ್ರೀಂ ನಿರಾಕರಣೆ
ಮೋಹರಂಃ ಮೆರವಣಿಗೆಗೆ ಸುಪ್ರೀಂ ನಿರಾಕರಣೆ
ವಿವಿ ಡೆಸ್ಕ್ಃ ದೇಶದಾದ್ಯಂತ ಮೋಹರಂ ಆಚರಣೆಗೆ ಕೋವಿಡ್ ನಿಯಮಾವಳಿಯಂತೆ ಆಚರಣೆಗೆ ಅವಕಾಶ ಕಲ್ಪಿಸಿದ್ದು, ಆದರೆ ಯಾವುದೇ ಪೀರಗಳ ಮೆರವಣಿಗೆಗೆ ಇತರೆ ಜನಸಂದಣಿ ಸೇರಿ ಕುಣಿಯುವ ಹಾಡುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಮೋಹರಂ ಅಂಗವಾಗಿ ಪೀರಗಳ ಮೆರವಣಿಗೆ ಅವಕಾಶ ಕಲ್ಪಿಸಬೇಕೆಂದು ಸುಪ್ರೀಂ ಕೊರ್ಟಗೆ ಅರ್ಜಿ ಸಲ್ಲಿಸಿದ್ದರೆನ್ನಲಾಗಿದೆ. ಈ ಕುರಿತು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ನ್ಯಾಯಾಧೀಶರು ಕೊವಿಡ್ ಹಿನ್ನೆಲೆ ಮೆರವಣಿಗೆಗೆ ಬ್ರೇಕ್ ಹಾಕಲಾಗಿದ್ದು, ಮೆರವಣಿಗೆಗೆ ನೂರಾರು ಸಂಖ್ಯೆಯಲ್ಲಿ ಜನ ಸೇರುತ್ತದೆ. ಕೋವಿಡ್ ನಿಯಂತ್ರ ಕಾಯ್ದೆಯಡಿ ಅವಕಾಶ ಕಲ್ಪಿಸಲಾಗಲ್ಲ ಎಂದು ಕೋರ್ಟ್ ಸ್ಪಷ್ಟ ಪಡಿಸಿದೆ.