ಪ್ರಮುಖ ಸುದ್ದಿ
ಪಾಕಿಸ್ತಾನದ ಪರ ಮಾತಾಡಿ ಟೀಕೆಗೆ ಗುರಿಯಾದ ಮೌಲ್ವಿಗೆ ಅನಾರೋಗ್ಯ!
ಹುಬ್ಬಳ್ಳಿ: ಪಾಕಿಸ್ತಾನ ನೋಡಲು ಅಲ್ಲಿಗೆ ಹೋಗಬೇಕಿಲ್ಲ, ಹುಬ್ಬಳ್ಳಿಯ ಗಣೇಶಪೇಟೆಯೇ ಪಾಕಿಸ್ತಾನದಂತೆ ಕಾಣಿಸುತ್ತಿದೆ ಎಂದು ದೇಶವಿರೋಧಿ ಹೇಳಿಕೆ ನೀಡಿದ್ದ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ವಿರುದ್ಧ ಈಗಾಗಲೇ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಇದೇ ವೇಳೆ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿಗೆ ರಕ್ತದೊತ್ತಡ ಹಾಗೂ ಮಧುಮೇಹ ಹೆಚ್ಚಳವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು ದೇಶವಿರೋಧಿ ಹೇಳಿಕೆ ಬಗ್ಗೆ ಒಂದು ಕಡೆ ಕೇಸು ದಾಖಲಾಗಿದೆ. ಮತ್ತೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿವೆ. ಅಲ್ಲದೆ ವಿವಿಧ ಸಂಘಟನೆಗಳು ಮೌಲ್ವಿ ಹೇಳಿಕೆ ವಿರೋಧಿಸಿ ನಾನಾಕಡೆ ಪ್ರತಿಭಟನೆ ನಡೆಸಿವೆ. ಹೀಗಾಗಿ, ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ರಾಜ್ಯದ ಜನರ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.