ಪ್ರಮುಖ ಸುದ್ದಿ
ಈ ಮೌಲ್ವಿಗೆ ಹುಬ್ಬಳ್ಳಿಯ ಗಣೇಶಪೇಟೆಯೇ ಪಾಕಿಸ್ತಾನವಂತೆ!
ಹುಬ್ಬಳ್ಳಿ: ನಾವು ಪಾಕಿಸ್ತಾನವನ್ನು ನೋಡಲು ಪಾಕಿಸ್ತಾನಕ್ಕೆ ಹೋಗುವ ಅವಶ್ಯಕತೆ ಇಲ್ಲ. ಹುಬ್ಬಳ್ಳಿಯ ಗಣೇಶಪೇಟೆಯೇ ನನಗೆ ಪಾಕಿಸ್ತಾನದಂತೆ ಗೋಚರಿಸುತ್ತಿದೆ. ಗಣೇಶಪೇಟೆಯಲ್ಲಿ ಪಾಕಿಸ್ತಾನ ನಿರ್ಮಾಣ ಆಗಿದೆ ಎಂದು ಗಣೇಶಪೇಟೆ ಮಸೀದಿಯ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ವಿವಾದಾತ್ಮಕ ಹೇಳಿಕೆ ನೀಡಿದ್ದು ಮೌಲ್ವಿ ನೀಡಿದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶನಿವಾರ ಸಂಜೆ ಈದ್ ಮಿಲಾದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೌಲ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾವು ಒಗ್ಗಟ್ಟಾಗಿದ್ದರೆ ತಲೆ ತಗ್ಗಿಸುವ ಅಗತ್ಯವಿಲ್ಲ. ಯಾರೊಬ್ಬರಿಗೂ ತಲೆ ಬಾಗದೆ ಎದೆ ಉಬ್ಬಿಸಿ ನಡೆಯಬೇಕು ಎಂದು ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳೂ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ. ಆದರೆ, ಈವರೆಗೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.