2019ರೊಳಗೆ ಚಂದ್ರನ ಮೇಲೆ ಸ್ಥಾಪನೆ ಆಗಲಿದೆ 4G ನೆಟ್ ವರ್ಕ್ !
-ವಿನಯ ಮುದನೂರ್
ದೆಹಲಿ : ಮೊಬೈಲ್ ಇಲ್ಲದೆ ಮನುಷ್ಯನ ಬದುಕು ದುಸ್ತರ ಎಂಬ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದರೂ ಮೊಬೈಲ್, ಕಾರಲ್ಲಿದ್ದರೂ ಮೊಬೈಲ್, ಕಚೇರಿಯಲ್ಲಿದ್ದರೂ ಮೊಬೈಲ್. ಒಂದು ಕ್ಷಣ ಮೊಬೈಲ್ ನೆಟವರ್ಕ್ ಪ್ರಾಬ್ಲಂ ಆದರೆ ಮನುಷ್ಯನ ಮುಖವೇ ಬಾಡುತ್ತದೆ. ಏನೋ ಕಳೆದುಕೊಂಡವರಂತೆ ಮನುಷ್ಯನ ನೆಮ್ಮದಿಯೇ ಹಾಳಾಗುತ್ತದೆ. ಅದರಲ್ಲೂ ಯುವ ಸಮೂಹಕ್ಕಂತೂ ಮೊಬೈಲೇ ಜೀವಾಳ ಎಂಬಂತಾಗಿದೆ. ಪರಿಣಾಮ ಎಲ್ನೋಡಿದರೂ ಮೊಬೈಲ್ ಅಂಗಡಿಗಳು ತಲೆ ಎತ್ತಿವೆ. ಗಲ್ಲಿ ಗಲ್ಲಿಗಳಲ್ಲಿ, ಹಳ್ಳಿಹಳ್ಳಿಗಳಲ್ಲಿ ನಿರ್ಮಾಣ ಆಗಿರುವ ಮೊಬೈಲ್ ನೆಟವರ್ಕ್ ಟವರ್ ಗಳು ಆಕಾಶಕ್ಕೆ ಏಣಿ ಹಾಕಿರುವಂತೆ ಭಾಸವಾಗುತ್ತಿವೆ.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಮೊಬೈಲ್ ನೆಟವರ್ಕ್ ಕಂಪನಿಗಳು ಚಂದ್ರನ ಮೇಲೂ ನೆಟವರ್ಕ್ ಟವರ್ ನಿರ್ಮಾಣಕ್ಕೆ ಪ್ಲಾನ್ ಮಾಡಿವೆ. ಜರ್ಮನಿ ಮೂಲದ ವೋಡಾಫೋನ್ ಮತ್ತು ನೋಕಿಯಾ ಕಂಪನಿಗಳು ಸಹಭಾಗಿತ್ವದಲ್ಲಿ 4ಜಿ ನೆಟವರ್ಕ್ ಸ್ಥಾಪನೆಗೆ ಮುಂದಾಗಿವೆ. ಪಿಟಿ ಸೈಂಟಿಸ್ಟ್ಸ್ ನೆರವಿನೊಂದಿಗೆ 2019ರ ವೇಳೆಗೆ ಚಂದ್ರನ ಮೇಲೆ 4ಜಿ ನೆಟ್ ವರ್ಕ್ ಸ್ಥಾಪನೆ ಆಗಲಿದೆ. NASA ಗಗನಯಾತ್ರಿಗಳು ಚಂದ್ರಯಾನ ಪೂರೈಸಿದ ಐವತ್ತು ವರ್ಷಗಳು ಗತಿಸಿರುವುದರ ನೆನಪಿಗಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ಸಿಇಓ ರಾಬರ್ಟ್ ಬ್ಹೋಮ್ ಪ್ರಕಟಿಸಿದ್ದಾರೆ.
2019ರ ಬಳಿಕ ಚಂದ್ರನೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದ ಭಾರತೀಯ ಪರಂಪರೆ ಹಾಗೂ ಚಂದಾಮಾಮನ ಕಥೆಗಳು ಸಹ ಭಿನ್ನರೂಪ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಠಿ ಆಗಲಿದೆ. ಅಳುವ ಮುದ್ದು ಮಕ್ಕಳಿಗೆ ಅಮ್ಮ ಸುಂದರ ಚಂದಿರನನ್ನು ತೋರಿಸಿ ಚಂದಾಮಾಮನ ಕಥೆ, ಹಾಡು ಹೇಳುವ ಕಾಲ ಸಂಪೂರ್ಣ ಮಾಯವಾಗಲಿದೆ. ಬದಲಾಗಿ ಚಂದ್ರನ ಬಳಿಯ ನೆಟ್ ವರ್ಕ್ ನಿಂದಲೇ ವಿಶಿಷ್ಟ ಹೆಚ್ ಡಿ ವಿಡಿಯೋಗಳು ತರಿಸಿಕೊಳ್ಳುವುದು. ನಮಗೆ ಗೊತ್ತಿರದ ವಿಷಯಗಳನ್ನು ತಿಳಿದುಕೊಳ್ಳುವುದು. ಚಂದಿರನಷ್ಟೇ ಆಕರ್ಷಕ ಚಿತ್ರ, ಕಥೆಗಳನ್ನು ಮೊಬೈಲ್ ಮೂಲಕ ಕಾಣಬಹುದಾಗಿದೆ.
ಪುಟ್ಟ ಮಕ್ಕಳಿಗೂ ಸಹ ಚಂದ್ರನ ಮೇಲಿನ ನೆಟ್ ವರ್ಕ್ ಟವರ್ ನಿಂದಲೇ ನಮ್ಮ ಮೊಬೈಲ್ ಗಳು ಕೆಲಸ ಮಾಡುತ್ತಿರುವುದು. ಯುಟ್ಯೂಬ್ , ಫೇಸ್ ಬುಕ್, ವಾಟ್ಸಪ್ ಗಳು ಕಾರ್ಯ ನಿರ್ವಹಿಸುತ್ತಿರುವುದು ಎಂಬುದು ತಿಳಿಯಲಿದೆ. ಪರಿಣಾಮ ಚಂದ್ರ ಇನ್ನು ಸುಂದರ ಚಂದಾಮಾಮನ ಬದಲಿಗೆ ಕುತೂಹಲ ಸೃಷ್ಠಿಸುವ ಗ್ರಹವಾಗಿ ಮಕ್ಕಳನ್ನು ಕಾಡಲಿದ್ದಾನೆ. ವೈಗ್ನಾನಿಕ ದೃಷ್ಟಿಯಿಂದ ಇದು ಸಹ ಉತ್ತಮ ಬೆಳವಣಿಗೆಯೇ ಆಗಿದೆ. ಆದರೂ ಚಂದಾಮಾಮನ ಕುರಿತ ಸಾಂಸ್ಕೃತಿಕ ಶ್ರೀಮಂತಿಕೆ ಅಂತ್ಯದ ಅಂಚಿನಲ್ಲಿರುವುದು ಮಾತ್ರ ಬೇಸರದ ಸಂಗತಿಯೇ ಸರಿ.