ಪ್ರಮುಖ ಸುದ್ದಿ
ಬಸವಸಾಗರ ಡ್ಯಾಂ ಮೇಲೆ ಮೊಸಳೆ ಪ್ರತ್ಯಕ್ಷ.! ಜಲಾಶಯಕ್ಕೆ ನೂಕಲು ಹರಸಾಹಸ
ಯಾದಗಿರಿಃ ಜಿಲ್ಲೆಯ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯದ ಮೇಲೆ ಮೊಸಳೆ ಪ್ರತ್ಯಕ್ಷವಾಗಿರುವದನ್ನು ಕಂಡು ಜನ ಮತ್ತು ಡ್ಯಾಂ ಅಧಿಕಾರಿ, ಸಿಬ್ಬಂದಿಗಳು ಆತಂಕಗೊಂಡಿದ್ದರು.
ಮೊಸಳೆ ಏಕಾಏಕಿ ಡ್ಯಾಂ ಮೇಲೆ ಪ್ರತ್ಯಕ್ಷಗೊಂಡು ಸುಮಾರು ಎರಡು ಗಂಟೆಗಳ ಕಾಲ ರಾಜಾರೋಷವಾಗಿ ಡ್ಯಾಂ ಮೇಲೆ ಓಡಾಡಿದೆ. ಇದರಿಂದ ಜನ, ಅಧಿಕಾರಿಗಳು ಗಾಬರಿಗೊಂಡಿದ್ದಾರೆ.
ನಂತರ ಜಲಾಶಯದ ಅಧಿಕಾರಿಗಳು ಸಿಬ್ಬಂದಿಯ ಸಹಾಯದಿಂದ ಮತ್ತೆ ಜಲಾಶಯ ನೀರೊಳಗೆ ಮೊಸಳೆಯನ್ನು ಬಿಡಲು ಹರಸಾಹಸ ಮಾಡಿದ್ದಾರೆ.
ಹಗ್ಗ, ಕಟ್ಟಿಗೆಗಳ ಸಹಾಯದಿಂದ ಸಿಬ್ಬಂದಿ ಮೊಸಳೆಯನ್ನು ಕೊನೆಗೂ ಜಲಾಶಯಕ್ಕೆ ನೂಕುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ.