ಪ್ರಮುಖ ಸುದ್ದಿ
ಎಲೆಕ್ಟ್ರಿಕಲ್ ಬಸ್ ಓಡಿಸಲು ಚಿಂತನೆ – ಯಡಿಯೂರಪ್ಪ
ವಿವಾ ಡೆಸ್ಕ್ಃ ರಾಜ್ಯದಲ್ಲಿ ಬಸ್ ಟಿಕೆಟ್ ದರ ಹೆಚ್ಚಿಸಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಬಸ್ ಟಿಕೆಟ್ ದರ ಇಳಿಕೆ ಮಾಡುವ ಕುರಿತು ಚಿಂತನೆ ನಡೆಸಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಹೊಸ ಬಸ್ ಖರೀದಿ ಇಲ್ಲ. ಆ ಮೇಲೆ ಮಾಲಿನ್ಯ ನಿಯಂತ್ರಣ ಮಾಡಬೇಕೆಂಬ ಸದುದ್ದೇಶದಿಂದ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಿದ್ದು, ಬೆಂಗಳೂರ ಸಿಟಿಯಲ್ಲಿ ಶೀಘ್ರದಲ್ಲಿ ಎಲೆಕ್ಟ್ರಿಕ್ ಬಸ್ ಓಡುವದನ್ನು ಕಾಣಬಹುದು ಯಾವುದಕ್ಕು ಕಾಯ್ದು ನೋಡಬೇಕು.