ಮನೆಯಲ್ಲಿಯೇ ಪ್ರಾರ್ಥನೆ ಮಾಡಿ ಹಬ್ಬ ಆಚರಿಸಿ- ಪಿಐ ಹನುಮರಡ್ಡೆಪ್ಪ
ರಂಜಾನ್ ಶಾಂತಿ ಸಭೆ
ಶಹಾಪುರಃ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾದ ರಂಜಾನ್ ಈ ಬಾರಿ ಕೊರೊನಾ ಮಹಾಮಾರಿಯಿಂದ ಸಾಮೂಹಿಕ ಪ್ರಾರ್ಥನೆ ಪರಸ್ಪರ ಆಲಿಂಗನ ಮಾಡಿಕೊಳ್ಳದೆ ಮನೆಯಲ್ಲಿಯೇ ಹಬ್ಬ ಆಚರಣೆ ಮಾಡಬೇಕು. ಸಾಮಾಜಿಕ ಅಂತ ಕಾಯ್ದುಕೊಳ್ಳಬೇಕು. ಲಾಕ್ ಡೌನ್ ನಿಯಮ ಪಾಲನೆ ಅಗತ್ಯವಾಗಿ ಎಲ್ಲರೂ ಪಾಲಿಸಬೇಕು ಎಂದು ನಗರ ಠಾಣೆ ಪಿಐ ಹನುಮರಡ್ಡೆಪ್ಪ ತಿಳಿಸಿದರು.
ನಗರದ ಚಾಂದ್ ಪ್ಯಾಲೇಸ್‍ನಲ್ಲಿ ಬುಧವಾರ ನಡೆದ ರಂಜಾನ್ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮುಸ್ಲಿಂ ಬಾಂಧವರ ಸಂಭ್ರಮ ಸಡಗರ ಕಸಿದುಕೊಂಡ ಮಹಾಮಾರಿಯನ್ನು ಹೊಡೆದೋಡಿಸಲು ನಾವೆಲ್ಲ ಎಚ್ಚರಿಕೆಯಿಂದ ಹಬ್ಬ ಆಚರಣೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಯಾವುದೇ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಮನೆಯಲ್ಲಿಯೇ ಪ್ರಾರ್ಥನೆ, ಹಬ್ಬದೂಟ ಸವಿಯಬಹುದು. ದೇಶದಿಂದ ಕೊರೊನಾ ನಾಶವಾಗಿ ಹೋಗಲಿ ಎಂದು ಎಲ್ಲರೂ ಮನೆಯಲ್ಲಿಯೇ ಪ್ರಾರ್ಥನೆ ಮಾಡುವ ಮೂಲಕ ಕೊರೊನಾ ತಡೆಗೆ ಪ್ರೋತ್ಸಾಹಿಸಿ. ಅಲ್ಲದೆ ಅನಗತ್ಯ ರಸ್ತೆಗಿಳಿಯಬಾರದು. ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಸಲ್ಲದ ಮೆಸೇಜ್‍ಗಳನ್ನು ಹಾಕಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವದು. ಲಾಕ್ ಡೌನ್ ನಿಯಮಗಳನ್ನು ಮುರಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವದು.
ಮುಸ್ಲಿಂ ಸಮಾಜದ ಹಿರಿಯರು ಕಿರಿಯರನ್ನು ಹತೋಟಿಯಲ್ಲಿ ಇಡುವ ಕೆಲಸ ಮಾಡಬೇಕು. ಯಾವುದೇ ಗಾಳಿ ಸುದ್ದಿಗೆ ಕಿವಗೊಡದೆ ಠಾಣೆಗೆ ಮೊದಲು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಈ ತಹಶೀಲ್ದಾರ ಜಗನ್ನಾಥರಡ್ಡಿ, ತಾಪಂ ಸಿಇಓ ಜಗನ್ನಾಥ ಮೂರ್ತಿ, ಪೌರಾಯುಕ್ತ ಬಸವರಾಜ ಶಿವಪೂಜೆ, ಪಿಎಸ್‍ಐ ಚಂದ್ರಕಾಂತ ಮೆಕಾಲೆ ಉಪಸ್ಥಿತರಿದ್ದರು. ಸಮಾಜದ ಮುಖಂಡರಾದ ಸಣ್ಣ ನಿಂಗಣ್ಣ ನಾಯ್ಕೋಡಿ, ಸಯ್ಯದ್ ಮುಸ್ತಫಾ, ಗುಂಡಪ್ಪ ತುಂಬಿಗಿ ಮಹಾದೇವಪ್ಪ ಸಾಲಿಮನಿ, ಗುರು ಕಾಮಾ, ಸೈದುದ್ದೀನ್ ಖಾದ್ರಿ, ಅಪ್ಪಣ್ಣ ದಶವಂತ, ಶಿವಕುಮಾರ ತಳವಾರ, ವೆಂಕಟೇಶ ಬೋನೇರ ಪಾಷಾ ಪಟೇ¯, ಭೀಮರಾಯ ತಳವಾರ, ಇತರರಿದ್ದರು.