ಪ್ರಮುಖ ಸುದ್ದಿ
ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ
ನವದೆಹಲಿಃ ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 6 ಸಾವಿರ ಗಡಿ ದಾಟಿದೆ.
ಸ್ಪೇನ್ ನಲ್ಲಿ ರವಿವಾರ ಒಂದೇ ದಿನ ಕೊರೊನಾ ಸೋಂಕಿನಿಂದ 105 ಜನ ಮೃತಪಟ್ಟಿದ್ದಾರೆ.
ಇಟಲಿಯಲ್ಲಿ ಕೊರೊನಾ ಸಾವಿನ ಮೃದಂಗವೇ ಬಾರಿಸುತ್ತಿದೆ.
ವಿಶ್ವದಲ್ಲಿ ಒಟ್ಟು 6036 ಜನ ಸಾವಿಗೀಡಾಗಿದ್ದಾರೆ. ಸೋಂಕಿತರ ಸಂಖ್ಯೆ 1.59.844 ಕ್ಕೆ ಏರಿಕೆಯಾಗಿದೆ. ಸದ್ಯ ಚೀನಾದಲ್ಲಿ ಸಾವಿನ ಸಂಖ್ಯೆ ಇಳಿಕೆ ಕಂಡು ಬಂದಿದೆ ಎಂಬ ಮಾಹಿತಿ ಇದೆ.