ಪ್ರಮುಖ ಸುದ್ದಿ
ಪಾಕಿಸ್ತಾನದ ಗುಣಗಾನ ಮಾಡಿ ಜೈಲು ಸೇರಿದ್ದ ಮೌಲ್ವಿಗೆ ಷರತ್ತುಬದ್ಧ ಜಾಮೀನು!
ಹುಬ್ಬಳ್ಳಿ: ಈದ್ ಮಿಲಾದ್ ಅಂಗವಾಗಿ ನಗರದ ಗಣೇಶ ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣೇಶಪೇಟೆ ಮಸೀದಿಯ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಮಾತನಾಡುತ್ತ ಗಣೇಶಪೇಟೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದರು. ಪರಿಣಾಮ ಮೌಲ್ವಿ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಬಳಿಕ ಶಹರ ಠಾಣೆಯಲ್ಲಿ ಕಲಂ 153 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಡಿಸೆಂಬರ್ 06ರಂದು ಮೌಲ್ವಿ ಖೈರಾತಿಯವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಇಂದು ಹುಬ್ಬಳ್ಳಿಯ ಒಂದನೇ ಜೆಎಂಎಫ್ ಸಿ ನ್ಯಾಯಾಲಯ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶಿಸಿದೆ. ಹೀಗಾಗಿ, ಸದ್ಯ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.