ಮೌಲ್ಯಯುತ ಜೀವನ ನಡೆಸಲು ಕಾಳಹಸ್ತೇಂದ್ರ ಸ್ವಾಮೀಜಿ ಕರೆ
ಶಹಾಪುರಃ ಸಂಭ್ರಮದ ಮೌನೇಶ್ವರ ಜಯಂತ್ಯುತ್ಸವ
ಯಾದಗಿರಿಃ ದುಡಿದು ಉಣ್ಣುವ ಅನ್ನ ಅಮೃತವಾಗಿರುತ್ತದೆ ಎಂಬುದು ಸದ್ಗುರು ಮೌನೇಶ್ವರರ ವಾಣಿಯಾಗಿದ್ದು, ಅವರ ವಾಣಿ ಮನುಷ್ಯನ ದಾರಿದ್ರ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ನಿತ್ಯ ಮೈಮುರಿದು ದುಡಿದುಉಣ್ಣಬೇಕು ಎಂಬುದರ ತಾತ್ಪರ್ಯವಾಗಿದೆ ಎಂದು ಏಕದಂಡಿಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ವಿಶ್ವಕರ್ಮ ಸಮಾಜದವತಿಯಿಂದ ನಡೆದ ಸದ್ಗುರು ಮೌನೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ವಿಶ್ವಕರ್ಮರಿಗೆ ಮೌನೇಶ್ವರರ ಕೃಪೆ ಸದಾ ಕಾಲ ಇರುತ್ತದೆ. ಮೌನೇಶ್ವರರು ಇಡಿ ವಿಶ್ವಕ್ಕೆ ಗುರುವಾಗಿದ್ದಾರೆ. ಅವರ ಜೀವನ ಚರಿತ್ರೆ ಅಮೋಘವಾಗಿದೆ. ಮೌನೇಶ್ವರರು ಮನುಷ್ಯರ ಬದುಕು ಬಣ್ಣ ಕುರಿತು ಸಾಕಷ್ಟು ಹಿತನುಡಿಗಳ ಮೂಲಕ ಮಾನವರನ್ನು ಎಚ್ಚರಿಸಿದ್ದಾರೆ.
16 ನೇ ಶತಮಾನದಲ್ಲಿ ಶರಣ ಸಂತ ಮೌನೇಶ್ವರರ ಬದುಕಿನ ಮೌಲ್ಯಗಳ ಕುರಿತು ಅಭ್ಯಾಸ ಮಾಡಬೇಕು. ಅದರಂತೆ ಮೌಲ್ಯಯುಕ್ತ ಜೀವನ ನಡೆಸಲು ಮೌನೇಶ್ವರರು ಪ್ರೇರಣದಾಯಕರಾಗಿದ್ದಾರೆ ಎಂದರು.
ಸಮಾಜದ ಅಧ್ಯಕ್ಷ ರಾಜಶೇಖರ ಬೊಮ್ಮನಹಳ್ಳಿ, ಮಹಿಳಾ ಅಧ್ಯಕ್ಷೆ ಶೈಲಾಕ್ಷಿ ಪತ್ತಾರ ಮಾತನಾಡಿದರು. ಹಿರಿಯರಾದ ಪಾಲಾಕ್ಷಿ ಅರಕೇರಿ, ರವೀಂದ್ರನಾಥ ಪತ್ತಾರ, ದೇವಿಂದ್ರಪ್ಪ ಕನ್ಯಾಕೋಳೂರ, ಶಂಕರ ಗುತ್ತರಗಿ, ಸಂತೋಷ ಪತ್ತಾರ, ಕುಸುಮಾ ಪತ್ತಾರ, ಗಂಗಾಧರ ಪತ್ತಾರ, ಅಯ್ಯಪ್ಪ ಕಂಚಗಾರ, ಕೃಷ್ಣಮೂರ್ತಿ ಪತ್ತಾರ, ಗಣೇಶ ಪತ್ತಾರ, ರಆಘವೇಂದ್ರ ಪತ್ತಾರ, ಸುಧಾಕರ ಆಣಿಕೇರಿ, ಮೌನೇಶ ಕೆಂಭಾವಿ, ಮಲ್ಲಣ್ಣ ರಾಜಾಪುರ, ಅಮರೇಶ ವಡಗೇರಿ, ಲಕ್ಷ್ಮಣ ಕಂಬಾರ ಸೇರಿದಂತೆ ಇತರರು ಇದ್ದರು.
ಮಹಿಳೆಯರು ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ 2018 ರ ಲಘು ಪಂಚಾಂಗ ಬಿಡುಗಡೆಗೊಳಿಸಲಾಯಿತು.