861 ಕೋಟಿ ವೆಚ್ಚದ ಅತ್ಯಾಧುನಿಕ ಸೌಲಭ್ಯದೊಂದಿಗೆ ಬೃಹತ್ ಸಂಸತ್ ಭವನ ನಿರ್ಮಾಣ
ಸಂಸತ್ ಸದಸ್ಯರಿಗೆ ಪ್ರತ್ಯೇಕ ಕೋಣೆ, ಅತ್ಯಾಧುನಿಕ ಸೌಲಭ್ಯದೊಂದಿಗೆ ಸಂಸತ್ ಕಟ್ಟಡ ನಿರ್ಮಾಣ
ವಿವಿ ಡೆಸ್ಕ್ಃ ಸಂಸತ್ ನೂತನ ಕಟ್ಟಡ ವಿಭಿನ್ನವಾಗಿ ಅತ್ಯಾಧುನಿಕ ಸೌಲಭ್ಯದೊಂದಿಗೆ ವಾಸ್ತು ವಿನ್ಯಾಸ ಜೊತೆಗೆ ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಸತ್ ಕಟ್ಟಡ ನಿರ್ಮಾಣ ಇದೇ ಡಿಸೆಂಬರ್ ನಲ್ಲಿ ಚಾಲನೆ ದೊರೆಯಲಿದೆ ಎಂದು ಲೋಕಸಭೆ ಕಾರ್ಯಾಲಯ ತಿಳಿಸಿದೆ.
ಈ ಹೊಸ ಸಂಸತ್ತಿನ ಭವನದಲ್ಲಿ ಎಲ್ಲಾ ಲೋಕಸಭಾ ಸದಸ್ಯರಿಗೆ ಪ್ರತ್ಯೇಕ ಕಚೇರಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಅಲ್ಲದೆ ಕಾಗದ ರಹಿತ ಕಚೇರಿ ನಿರ್ಮಾಣಕ್ಕೆ ಡಿಜಿಟಲ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಹಾಲಿ ಸಂಸತ್ ಸದಸ್ಯರ ಕಾರ್ಯಾಚಟುವಟಿಕೆಗೆ ಯಾವುದೇ ಅಡ್ಡಿ ಸಮಸ್ಯೆಯಾಗದಂತೆ ಕಟ್ಟಡ ಕಾಮಾಗಾರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಮತ್ತು ವಿಶೇಷವಾಗಿ ನೂತನ ಸಂಸತ್ ಭವನ ಸುತ್ತಮುತ್ತಲು ಶಬ್ಧಮಾಲಿನ್ಯ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಹೀಗಾಗಿ ಕಟ್ಟಡ ಕಾಮಗಾರಿ ಕಣ್ಗಾವಲಾಗಿ ಸಮಿತಿಯೊಂದನ್ನು ರಚಿಸಲಾಗಿದೆ.
ಹೊಸ ಸಂಸತ್ ಕಟ್ಟಡ 861 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇಲ್ಲಿ 888 ಲೋಕಸಭಾ ಸದಸ್ಯರು ಮತ್ತು 384 ರಾಜ್ಯಸಭಾ ಸದಸ್ಯರಿಗೆ ಆಸನ ವ್ಯವಸ್ಥೆ ಸಹ ಒಳಗೊಂಡಿರಲಿದೆ.
ಪ್ರತಿ ಸದಸ್ಯರಿಗೆ ಕೊಠಡಿ, ಕಚೇರಿಗೆ ಬೆಕಾದ ಉಪಕರಣಗಳ ಜೊತೆಗೆ ಡಿಜಟಿಲೀಕರಣ ವ್ಯವಸ್ಥೆ, ಪ್ರಜಾಪ್ರಭುತ್ವ ಇತಿಹಾಸ ತೋರುವ ವಿಶಾಲ ಕಾನ್ಸಿಟಿಟ್ಯೂಷನ್ ಹಾಲ್, ಲಾಂಜ್, ಲೈಬ್ರರಿ ಮತ್ತು ವಿವಿಧ ಸಮಿತಿಗೆ ಪ್ರತ್ಯೇಕ ಕೊಠಡಿ, ಭೋಜನ್ ಕೊಠಡಿ, ಪಾರ್ಕಿಂಗ್ ಏರಿಯಾವನ್ನು ಒಳಗೊಂಡಿರಲಿದೆ.
ಒಟ್ಟಾರೆ ಅತ್ಯಾಧುನಿಕವಾಗಿ ಸಕಲ ವ್ಯವಸ್ಥೆ ಹೊಂದಿದ ಸಂಸತ್ ಕಟ್ಟಡ ನಿರ್ಮಾಣಕ್ಕೆ ಡಿಸೆಂಬರ್ ನಲ್ಲಿ ಬಹುತೇಕ ಚಾಲನೆಗೆ ದಿನಾಂಕ ಫಿಕ್ಸ್ ಆಗಿದ್ದು 2022 ರ ಅಕ್ಟೋಬರ್ ನಲ್ಲಿ ಕಂಪ್ಲೀಟ್ ಮುಗಿಸುವ ಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಲೋಕಸಭಾ ಕಾರ್ಯಾಲಯ ಮೂಲಗಳು ಮಾಹಿತಿ ಹೊರಹಾಕಿವೆ.