ಪ್ರಮುಖ ಸುದ್ದಿ
ನನ್ನ ಗಳಿಕೆ ಲಾರಿಯಿಂದ ಶುರುವಾಗಿದೆ -ಎಂಟಿಬಿ ನಾಗರಾಜ
ತಂದೆ ಕೊಡಿಸಿದ್ದ ಲಾರಿ ತಂದ ಸಂಪತ್ತು
ಹೊಸಕೋಟೆಃ ನಾನು ಕೋಟಿಗಟ್ಟಲೇ ಗಳಿಸಿದ್ದೇನೆ ಆದರೆ ತೆರಿಗೆ ವಂಚನೆ ಮಾಡಿಲ್ಲ. ತೆರಿಗೆ ಪಾವತಿಸಿದ್ದೇನೆ. ಆಸ್ತಿ ಸಂಪತ್ತು ದುಡ್ಡು ನೋಡಿ ಎಲ್ಲಿಂದ ಬಂತು ಎಂದು ಉಬ್ಬೇರಿಸುವವರಿತ್ತಾರೆ. ನನಗೆ ನನ್ನ ತಂದೆಯವರು ಕೊಡಿಸಿದ ಲಾರಿಯಿಂದ ವ್ಯಾಪಾರ ಮಾಡಿ ದುಡಿದು ಇಷ್ಟೊಂದು ಗಳಿಕೆ ಮಾಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ ತಿಳಿಸಿದ್ದಾರೆ.
ಹೊಸಕೋಟೆ ಉಪ ಚುನಾವಣೆ ನಡೆದ ಹಿನ್ನೆಲೆ ಹೊಸಕೋಟೆ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧೆಗೆ ಇಳಿದ ನಾಗರಾಜಮ ಪ್ರಚಾರ್ಥವಾಗಿ ಕ್ಷೇತ್ರದ ಇಟ್ಟಸಂದ್ರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಂದೆಯವರ ಕೊಡಿಸಿದ ಲಾರಿಯಿಂದ ನಾನು ನನ್ನ ವ್ಯಾಪಾರ ಶುರು ಮಾಡಿದ್ದೆ ಅದರಿಂದ ಇಲ್ಲಿವರೆಗೆ ಬಂದಿದೇನೆ ಎಂದರು.