ಶಹಾಪುರದಲ್ಲಿ ಬಿಜೆಪಿ ಯಾತ್ರೆಗೆ ಭಾರೀ ಜನಸ್ತೋಮ ನಿರೀಕ್ಷೆ!
ಪರಿವರ್ತನಾ ಯಾತ್ರೆಃ ಕಾರ್ಯಕರ್ತರಲ್ಲಿ ಹುಮ್ಮಸ್ಸು
ಶಹಾಪುರ: ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿಂದು ಬಿಜೆಪಿಯಿಂದ ನವಕರ್ನಾಟಕ ಪರಿವರ್ತನಾ ಯಾತ್ರೆ ಆಯೋಜಿಸಲಾಗಿದೆ. ಮದ್ಯಾಹ್ನ 3ಗಂಟೆ ಸುಮಾರಿಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಕೇಂದ್ರ ಸಚಿವೆ ಪುರಂದರೇಶ್ವರಿ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಸಿ.ಟಿ.ರವಿ, ಗೋವಿಂದ ಕಾರಜೋಳ, ಬಿಜೆಪಿ ಎಸ್ಸಿ,ಎಸ್ಟಿ. ಮೋರ್ಚಾ ರಾಜ್ಯಧ್ಯಕ್ಷ ರಾಜೂಗೌಡ ಸುರಪುರ, ಸ್ಥಳೀಯ ಶಾಸಕ ಗುರು ಪಾಟೀಲ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.
ಶಹಾಪುರ ಮತಕ್ಷೇತ್ರದ ಶಾಸಕ ಗುರು ಪಾಟೀಲ್ ನಗರದಲ್ಲೇ ಬಿಡಾರ ಹೂಡಿದ್ದು ಪರಿವರ್ತನಾ ಯಾತ್ರೆ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ನಗರಾದ್ಯಂತ ಎಲ್ಲೆಡೆ ಬಿಜೆಪಿ ನಾಯಕರ ಕಟೌಟ್, ಬ್ಯಾನರ್, ಬಟ್ಟಿಂಗ್ಸ್ ರಾರಾಜಿಸುತ್ತಿವೆ. ಸಿಪಿಎಸ್ ಶಾಲಾ ಮೈದಾನದಲ್ಲಿ ಈಗಾಗಲೇ ಪರಿವರ್ತನಾ ಯಾತ್ರೆಗೆ ಬೃಹತ್ ವೇದಿಕೆ ಸಿದ್ಧವಾಗಿದ್ದು ಸುಮಾರು 20 ಸಾವಿರ ಜನ ಭಾಗಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಗ್ರಾಮೀಣ ಪ್ರದೇಶಗಳಿಂದ ಬೆಳಗ್ಗೆಯಿಂದಲೇ ವಿವಿಧ ವಾಹನಗಳಲ್ಲಿ ಬಿಜೆಪಿ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.