*ಮತದಾನ- ಹಿತ ಚಿಂತನೆ*
ಕೆಟ್ಟ, ಧ್ವೇಷ ಭಾವ ಅಳಸಿ
ಎಲ್ಲರೊಳು ರಾಷ್ಟ್ರ ಪ್ರೇಮ
ಭಾವ ಬೆಳೆಸಿ. ಜ್ಷಾನದೀವಿಗೆ ಹಚ್ಚಿ
ಎಲ್ಲಡೆ ಬೆಳಕ ಪಸರಿಸಿ,
ಧೈರ್ಯದಿ ಮುಂದೆ ನುಗ್ಗುತಾ
ಮನದ ಗುರಿಯ ಸಾಧಿಸಿ.
ಸೋತೆವೆಂದು ಕುಗ್ಗದಿರಿ, ಸೋಲೆ ಗೆಲುವಿನ ಸಾಧನವೆಂದು ತೋರಿಸಿ.
ಸ್ವಾರ್ಥದ ಚಿಂತೆ ದೂರಸರಿಸಿ
ರಾಷ್ಟ್ರ ಚಿಂತನೆ ಭದ್ರಗೊಳಿಸಿ,
ದೇಶದ ಹಿತ ಕಾಪಾಡಿ,
ಮುಂದೆ ಉಜ್ವಲ ಭವಿಷ್ಯ ನೋಡಿ.
ನಮ್ಮವರೇ ನಿಂದಿಸಿ ಹೊರಸಿಹರು ಸುಳ್ಳು ಅಪವಾದ. ಹೊರಬರಲು ನಿರ್ಧರಿಸಿ, ಕಠಿಣ ಸೇವೆ ಸ್ವೀಕರಿಸಿ. ಮುಂದೆ ಅನುಭವಿಸಿ ಫಲಪ್ರದ.
ಗಾಂಧೀಜಿ ಕಂಡ ಕನಸೆಲ್ಲ ನನಸಾಗಿಸಲು
ಇಂದೇ ಪಣವ ತೊಡಿ,
ರಾಷ್ಟ್ರ ಹಿತ ಬಯಸಿ ಲೋಕಸಭೆಗೆ, ಮತದಾನವ ಮಾಡಿ.
ಯಾವುದೇ ಆಮೀಷಕ್ಕೊಳಗಾಗದೆ, ಸ್ವಜಾತಿಭಾವ ತೊರೆಯಿರಿ,
ದೇಶದೊಳು ನೆಲೆಸಿದ ನಾವೆಲ್ಲ ಒಂದೆ ಎಂಬ ಪ್ರೀತಿಭಾವ ಮೆರೆಯಿರಿ.
– ಮಲ್ಲಿಕಾರ್ಜುನ ಮುದನೂರ