ಸೂತ್ರವಿಲ್ಲದ ಗಾಳಿಪಟ
ಕೊಟ್ಟ ಮಾತುಗಳು ಈಗೇಕೆ ನೆನಪಿಸಿಹವು, ಸುಖದ ಸೋಪಾನದಿ ವಿರಮಿಸುತ್ತಿರುವಾಗ,
ಮೊದಲು ಮೋಹದಿ ಅತ್ತು, ನಲಿದು ಬಿಡನಿನ್ನೆನು ಬಿಟ್ಟರೆ ಬದುಕಲಾರೆನೆಂಬ ಮಾತಿಗೆ ಅರ್ಥವಿದೆಯೇ ಈಗ,
ಜೀವಕ್ಕಿಂತ ಹೆಚ್ಚಾಗಿ ನಿನ್ನ ಪ್ರೀತಿ ಆಲಾಪಕೆ ಹುಚ್ವಾಗಿ, ಸಾಗಿತ್ತು ಬದುಕು ರಂಗೀನ್ ದುನಿಯಾದಾಗ,
ತಂದಿಟ್ಟಿ ನೀ ಪ್ರೇಮಕ್ಕೆ ಕಪ್ಪು ಚುಕ್ಕಿ
ಬಂದಪ್ಪಳಿಸಿ ಬಿಟ್ಟೆಯಲ್ಲ ಒಮ್ಮೆಲೆ ಸಿಡಿಲೊಡೆದಂತೆ ಎದೆಗೆ,
ಇಷ್ಟವಿದ್ದೋ..ಇಲ್ಲದೆಯೋ ಮತ್ತೊಬ್ಬನ ಜೊತೆಯಾಗಿ ತುಳಿದಿ ಸಪ್ತಪದಿ ನಿನಗ್ಯಾತರ ಚಿಂತೀಗ,
ನನ್ನೊಡನೆ ಹಂಚಿಕೊಂಡ ನಿನ್ನ ಬಯಕೆಗಳೆಲ್ಲ ಬೇರೆಯವರೊಂದಿಗೆ ಕಂಡುಕೊಳ್ಳಲಿಚ್ಛಿಸುವ ನಿನ್ನ ಮನಕೇನೆನ್ನಲ್ಲೀಗ,
ಆದರೂ ನನ್ನನ್ನೆ ನೋಡುವ ನಿನ್ನ ನೋಟ ನಿಂತ ನೀರಲ್ಲಿ ಕಲ್ಲೆಸೆದು ನೋಡಿದಂತೆ, ಮಾಡಿಬಿಟ್ಟೆ ಸೂತ್ರವಿಲ್ಲದ ಗಾಳಿಪಟ ನನ್ನೀಗ..
– ಮಲ್ಲಿಕಾರ್ಜುನ ಮುದ್ನೂರ.