ಪ್ರಮುಖ ಸುದ್ದಿ
ಭೂಕುಸಿತ : ಮಡಿಕೇರಿಯಲ್ಲಿ ಹಲವರ ಸಾವು, ನೋವು!
ಮಡಿಕೇರಿ : ಭಾಗಮಂಡಲದ ಕೋರಂಗಾಲ ಸಮೀಪ ಭೂಕುಸಿತದಿಂದಾಗಿ 4 ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದ್ದು ಮತ್ತೋರ್ವ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮೃತಪಟ್ಟವರನ್ನು ಯಶವಂತ ಅತ್ತೇಡಿ, ಬಾಲಕೃಷ್ಣ ಬೋಳಾನ, ಯಮುನ ಬೋಳಾನ ಮತ್ತು ಉದಯ ಕಾಳಾನ ಎಂದು ಗುರುತಿಸಲಾಗಿದೆ. ರಕ್ಷಣಾ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮತ್ತೊಂದು ಕಡೆ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು ಮಮತಾ ಮತ್ತು ಲಿಖಿತಾ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.