ಪ್ರಮುಖ ಸುದ್ದಿ
ಭೀಮಾ ನದಿಯಲ್ಲಿ ತೇಲಿ ಬಂತು ವ್ಯಕ್ತಿಯ ಶವ: ಕೊಲೆಯೋ ಆತ್ಮಹತ್ಯೆಯೋ?
ಯಾದಗಿರಿ : ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮ ಸಮೀಪದ ಭೀಮಾ ನದಿತೀರದಲ್ಲಿ ವ್ಯಕ್ತಿಯ ಶವಪತ್ತೆ ಆಗಿದೆ. ಮೃತ ವ್ಯಕ್ತಿಯನ್ನು ಕಲಬುರಗಿ ಜಿಲ್ಲೆಯ ಜೇವರಗಿ ಮೂಲದ ಸಿದ್ಧಾರ್ಥ ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿ ನದಿಗೆ ಶವ ಬಿಸಾಡುವ ಮೂಲಕ ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಭೀಮರಾಯನ ಗುಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದಷ್ಟೇ ಸಿದ್ಧಾರ್ಥನ ಸಾವಿನ ಸತ್ಯ ಬಯಲಾಗಬೇಕಿದೆ.