ಪ್ರಮುಖ ಸುದ್ದಿ
ಭೀಕರ ಹತ್ಯೆ : ಭೀಮಾ ತೀರದಲ್ಲಿ ಮತ್ತೆ ಹರಿಯಿತು ನೆತ್ತರು
ವಿಜಯಪುರ : ನಿನ್ನೆ ತಡರಾತ್ರಿ ಸಮಯದಲ್ಲಿ ಯುವಕನೋರ್ವನ ಮೇಲೆ ಮಾರಕಾಸ್ತಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಇಂಡಿ ಪಟ್ಟಣದ ಅಗರಖೇಡ್ ರಸ್ತೆಯಲ್ಲಿ ನಡೆದಿದೆ. ಮುಖ ಗುರುತು ಸಿಗದಂತೆ ಕಲ್ಲಿನಿಂದ ಜಜ್ಜಿ ಹಾಕಲಾಗಿದೆ. ಹತ್ಯೆಗೀಡಾದ ಯುವ ಸುನೀಲ್ ಹೊಟಗಿ(23) ಎಂದು ಗುರುತಿಸಲಾಗಿದೆ. ಆದರೆ, ಹತ್ಯೆಗೆ ಕಾರಣವೇನು, ಹತ್ಯೆಗೈದವರು ಯಾರು ಎಂಬುದು ಈವರೆಗೆ ತಿಳಿದು ಬಂದಿಲ್ಲ. ಸ್ಥಳಕ್ಕೆ ಇಂಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದಷ್ಟೇ ಹತ್ಯೆ ಪ್ರಕರಣ ಬಯಲಾಗಬೇಕಿದೆ.