ಪ್ರಮುಖ ಸುದ್ದಿ
ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯ ಭೀಕರ ಹತ್ಯೆ!
ಕಲಬುರಗಿ : ನಗರದ ಕಾಮರೆಡ್ಡಿ ಆಸ್ಪತ್ರೆಗೆ ಆಗಮಿಸಿದ್ದ ವ್ಯಕ್ತಿ ಅಲ್ಲಿನ ಉದ್ಯಾನವನ ಸಮೀಪ ತಲೆಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯೋರ್ವನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಆಳಂದ ಪಟ್ಟಣದ ರವಿ ಚಿಂಚೋಳಿ (35) ಎಂದು ಗುರುತಿಸಲಾಗಿದೆ. ಸ್ಟೇಶನ್ ಬಜಾರ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು ಪೊಲೀಸರ ತನಿಖೆಯಿಂದಾಗಿ ಹತ್ಯೆಗೆ ಕಾರಣವೇನು. ಕೊಲೆಗಡುಕರು ಯಾರು ಎಂಬುದು ತಿಳಿದು ಬರಬೇಕಿದೆ.