ದುರ್ನಾತ ಬೀರುತ್ತಿರುವ ಕಲಬುರ್ಗಿ ರೈಲು ನಿಲ್ದಾಣ
ಸ್ವಚ್ಛತೆ ಕಾಣದ ಕಲಬುರ್ಗಿ ರೈಲು ನಿಲ್ದಾಣ
ದುರ್ನಾತ ಬೀರುತ್ತಿರುವ ಕಲಬುರಗಿ ರೈಲು ನಿಲ್ದಾಣ..!
ಕಲಬುರ್ಗಿಃ ಹೈದ್ರಾಬಾದ್ ಕರ್ನಾಟಕದ ಪ್ರಮುಖ ರೈಲು ನಿಲ್ದಾಣವಾದ ಕಲಬುರ್ಗಿ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆ ದುರ್ನಾತ ಬೀರಿ ಮೂಗು ಮುಚ್ಚಿಕೊಂಡೆ ಒಳಗಡೆ ಪ್ರವೇಶಿಸುವ ದುಸ್ಥಿತಿ ಬಂದಿದೆ.
ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಎಲ್ಲೆಂದರಲ್ಲಿ ಪಾನ್ ಬೀಡಾ ಉಗುಳಿರುವದು ಕಂಡು ಬರುತ್ತದೆ. ನಿಲ್ದಾಣದಲ್ಲೂ ಕಸ ತ್ಯಾಜ್ಯ ಬಿದ್ದಿದ್ದು, ಅಸಮರ್ಪಕ ಸ್ವಚ್ಛತೆಯಿಂದ ಕೂಡಿರುವದು ಕಂಡು ಬರುತ್ತಿದೆ.
ಇನ್ನೂ ಪಾರ್ಕಿಂಗ್ ವ್ಯವಸ್ಥೆ ಬದಿಯಲ್ಲಿರುವ ಶೌಚಾಲಯ ಸ್ವಚ್ಛಗೊಳಿಸದೆ ಎಷ್ಟು ವರ್ಷ ಕಳೆದವೋ ಗೊತ್ತಿಲ್ಲ. ಗಬ್ಬೆದ್ದು ದುರ್ನಾತ ಬೀರುತ್ತದೆ. ಪ್ರಯಾಣಿಕರಿಗೆ ಮೂತ್ರ ವಿಸರ್ಜನೆಗೆ ಸ್ವಚ್ಛ ಶೌಚಾಲಯ ವಿಲ್ಲದ ಕಾರಣ, ಶೌಚಾಲಯದ ಪಕ್ಕದಲ್ಲಿಯೇ ಪಾರ್ಕಿಂಗ್ ಆವರಣದಲ್ಲಿಯೇ ಗಂಡಸರು ಮೂತ್ರ ಮಾಡುತ್ತಿದ್ದು, ವಾತಾವರಣವೆಲ್ಲ ಕಲುಷಿತಗೊಂಡಿದೆ.
ಕಾರಣ ಕೂಡಲೇ ಕಲಬುರ್ಗಿ ನಿಲ್ದಾಣಕ್ಕೊಂದು ಕಾಯಕಲ್ಪ ಕಲ್ಪಿಸಬೇಕಿದೆ. ಹೈಕ ಭಾಗದ ನಿಲ್ದಾಣವೆಂದು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣವೆಂಬ ಆರೋಪಗಳು ಕೇಳಿ ಬರುತ್ತಿವೆ.
ಕೂಡಲೇ ನಿಲ್ದಾಣ ಸ್ವಚ್ಛತೆ ಜೊತೆಗೆ ನಿಲ್ದಾಧ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು, ಪ್ರಯಾಣಿಕರಿಗೆ ಸೂಕ್ತ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಪ್ರಯಾಣಿಕ ರಾಜು ಚಿಲ್ಲಾಳ ಆಗ್ರಹಿಸಿದ್ದಾರೆ.
ನಿಲ್ದಾಣ ಗಬ್ಬೆದ್ದು ದುರ್ನಾತ ಬೀರುತ್ತಿದೆ. ಪಾರ್ಕಿಂಗ್ ಹೊರ ಆವರಣದಲ್ಲಿಯೇ ಪ್ರಯಾಣಿಕರು ಇಳಿಯುತ್ತಿದ್ದಂತೆ, ಇನ್ನೇನು ನಿಲ್ದಾಣ ಒಳ ಪ್ರವೇಶಸುತ್ತಿರುವಾಗಲೇ ವಾತಾವರಣ ಗಬ್ಬೆದ್ದಿರುವದು ತಿಳಿಯುತ್ತದೆ. ಮೈಸೂರ, ಬೆಂಗಳೂರ ಇತರಡೆ ಇರುವ ನಿಲ್ದಾಣದಂತೆ ನಮ್ಮ ಕಲಬುರಗಿ ರೈಲು ನಿಲ್ದಾಣವು ಕಂಗೊಳಿಸುವಂತೆ ಮಾಡಬೇಕು. ಸಕಲ ಮೂಲ ಸೌಲಭ್ಯ ಕಲ್ಪಿಸಬೇಕು. ಸದಾ ಸ್ವಚ್ಛತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ನಿಲ್ದಾಣದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಶ್ರಮಿಸಲಿ.
–ಅಬ್ರಾಹಂ ವಕೀಲರು.