
ಶಹಾಪುರಃ ಮದ್ರಿಕಿ ಮಾಪಣ್ಣ ಸೇರಿ ಜೋಡಿ ಕೊಲೆ
ಸಾದ್ಯಾಪುರ ಕ್ರಾಸ್ ಬಳಿ ದುಷ್ಕೃರ್ಮಿಗಳಿಂದ ಹತ್ಯೆ
ಶಹಾಪುರಃ ತಾಲೂಕಿನ ಮದ್ರಿಕಿ ಗ್ರಾಮದ ನಿವಾಸಿಯಾಗಿದ್ದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಾಪಣ್ಣ ಮದ್ರಿಕಿ ಹಾಗೂ ಆತನ ಜತೆಗಿದ್ದ ಅಲಿಸಾಬ ಇರ್ವರನ್ನು ದುಷ್ಕರ್ಮಿಗಳು ಕೊಲೆಗೈದ ಘಟನೆ ಇಂದು ಬೆಳಗ್ಗೆ ಭೀ.ಗುಡಿ ಠಾಣಾ ವ್ಯಾಪ್ತಿ ನಡೆದಿದೆ.
ಮದ್ರಿಕಿ ಮಾಪಣ್ಣ ಮತ್ತು ಅದೇ ಗ್ರಾಮದ ಅಲಿಸಾಬ ಎಂಬಾತ ಇಬ್ಬರು ಸೇರಿ ಭೀಮರಾಯನ ಗುಡಿಯಲ್ಲಿ ರವಿವಾರ ನಡೆಯುವ ಸಂತೆಗೆ ತರಕಾರಿ ತರಲು ತೆರಳಿದ್ದರು ಎನ್ನಲಾಗಿದೆ. ಸಂತೆ ಮುಗಿಸಿಕೊಂಡು ಎಂದಿನಂತೆ ಸ್ವಗ್ರಾಮ ಮದ್ರಿಕಿಗೆ ವಾಪಸ್ ತೆರಳುವಾಗ ಮಾರ್ಗ ಮಧ್ಯ ಸಾದ್ಯಾಪುರ ಗ್ರಾಮ ಕ್ರಾಸ್ ಹತ್ತಿರ ದುಷ್ಕರ್ಮಿಗಳು ಶಸ್ತ್ರಾಸ್ತ್ರ ದೊಂದಿಗೆ ಮೇಲೆರಗಿ ಕೊಲೆಗೈಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೈಕ್ ಜತೆಗಿದ್ದ ಇನ್ನೋರ್ವ ಅಲಿಸಾಬ ತಪ್ಪಿಸಿಕೊಂಡು ಮದ್ರಿಕಿ ಗ್ರಾಮದ ಕಡೆ ಓಡಿ ಹೋಗಿದ್ದಾನೆ ಎನ್ನಲಾಗಿದೆ.
ಅಲಿಸಾಬ ಕೊಂದವರಾರು.?
ಮಾಪಣ್ಣನನ ದುಷ್ಕರ್ಮಿಗಳು ಹತ್ಯೆಗೈದಿದ್ದು, ಅಲಿಸಾಬ ಈತನನ್ನು ಮಾಪಣ್ಣನ ಬೆಂಬಲಿಗರು ಮತ್ತು ಸಂಬಂಧಿಕರು ಮಾಪಣ್ಣನ ಕೊಲೆ ಹೇಗೆ ನಡೆಯಿತು ನಿನೇಕೆ ಓಡಿ ಬಂದಿರುವೆ ಮಗನೇ ಎಂದು ಅಲಿಸಾಬನನ್ನು ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲಿಸುತ್ತಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಡಿಎಸ್ಪಿ ತಿಳಿಸಿದ್ದಾರೆ.