ಭೀಮಾತೀರದಲ್ಲಿ ಭೀಕರ ಕೊಲೆ, ಜನರಲ್ಲಿ ಆತಂಕ
ವಿಜಯಪುರಃ ಕತ್ತು ಕೊಯ್ದು ಯುವಕನ ಕೊಲೆ
ವಿಜಯಪುರಃ ಹೈಸ್ಕೂಲ್ ಮೈದಾನದಲ್ಲಿ ಯುವಕನೋರ್ವನ ಕತ್ತು ಕೊಯ್ದು ಕೊಲೆಗೈದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.
ಗಣಪತಿ ಕವಲಗಿ(35) ಎಂಬಾತನೇ ಕೊಲೆಯಾದ ಯುವಕ. ಅಗರಖೇಡ ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಯಾವ ಕಾರಣಕ್ಕಾಗಿ ಎಂಬುದು ತಿಳಿದು ಬಂದಿಲ್ಲ.
ಸ್ಥಳಕ್ಕೆ ಇಂಡಿ ಪಟ್ಟಣದ ಪೊಲೀಸರು ಭೇಟಿ ನೀರಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕನನ್ನು ಕೊಂದ ಆರೋಪಿಗಳ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದು, ಕೂಡಲೇ ಘಟನೆ ಕುರಿತು ಪತ್ತೆ ಮಾಡಲಾಗುವುದು. ಆರೋಪಿಗಳ ಕೃತ್ಯ ಬಯಲು ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದಲ್ಲಿ ಆತಂಕಃ ಗ್ರಾಮದ ಶಾಲಾ ಮೈದಾನದಲ್ಲಿ ಕೃತ್ಯ ನಡೆದಿದ್ದು, ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಯುವಕನ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಯುವಕನ ಕತ್ತು ಸೀಳಿರುವ ಘಟನೆ ಜನರಲ್ಲಿ ಭಯ ಉಂಟುಮಾಡಿದೆ. ಹೀಗಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಜನರೂ ಗುಪ್ತ ಗುಪ್ತವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಯಾರೊಬ್ಬರು ಬಹಿರಂಗವಾಗಿ ಮಾತನಾಡುವುದು ನಾಲ್ಕು ಜನರು ಕೂಡಿ ರಸ್ತೆಗೆ ಬರುತ್ತಿಲ್ಲವೆಂದು ಗ್ರಾಮಸ್ಥರು ತಿಳಿಸಿದ್ದಾರೆ.