ಪ್ರಮುಖ ಸುದ್ದಿ
ರುಚಿಕರವಾದ ಮಶ್ರೂಮ್ ಗ್ರೇವಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು…
- ಮಶ್ರೂಮ್ –ಎರಡು ಪ್ಯಾಕೆಟ್
- ಬಟಾಣಿ- ಒಂದು ಬಟ್ಟಲು
- ಈರುಳ್ಳಿ –2
- ಟೊಮೆಟೊ– 4
- ದನಿಯಾ ಪುಡಿ– ಎರಡು ಚಮಚ
- ಗರಂ ಮಸಾಲ –ಒಂದು ಚಮಚ
- ಅರಿಸಿನ ಪುಡಿ– ಒಂದು ಚಮಚ
- ಶುಂಠಿ -ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಕಸ್ತೂರಿ ಮೇಥಿ–ಒಂದು ಚಮಚ
- ಸೋಂಪು ಕಾಳು –ಒಂದು ಚಮಚ
- ಚಕ್ಕೆ –2
- ಲವಂಗ –2
- ಸ್ಟಾರ್ ಮಸಾಲ ಹೂ– 2
- ಅನಾನಸ್ ಮೊಗ್ಗು-2
- ಏಲಕ್ಕಿ –2
- ಎಣ್ಣೆ- ನಾಲ್ಕು ಟೇಬಲ್ ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಕಸ್ತೂರಿ ಮೇಥಿ, ಸೋಂಪು, ಚಕ್ಕೆ -ಲವಂಗ, ಸ್ಟಾರ್ ಮಸಾಲ ಹೂ, ಅನಾನಸ್ ಮೊಗ್ಗು, ಏಲಕ್ಕಿ ಸೇರಿಸಿ ಮಿಶ್ರಣ ಮಾಡಬೇಕು.
- ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಬಳಿಕ ಟೊಮೆಟೊ, ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಬೆರೆಸಿಕೊಡಬೇಕು.
- ನಂತರ ಮಸಾಲ ಪುಡಿಗಳು ಹಾಗೂ ಬಟಾಣಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀರನ್ನು ಹಾಕಿ 5 ನಿಮಿಷಗಳ ಕಾಲ ಬಟಾಣಿ ಬೇಯಲು ಬಿಡಿ. ಇದೀಗ ಕತ್ತರಿಸಿದ ಮಶ್ರೂಮ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- 10 ರಿಂದ 15 ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಇದೀಗ ರುಚಿಕರವಾದ ಮಶ್ರೂಮ್ ಗ್ರೇವಿ ಸವಿಯಲು ಸಿದ್ಧ.