ಅನಿರೀಕ್ಷಿತ ದಾಳಿ ಬಾಲ ಕಾರ್ಮಿಕ ಪಾಲಕರಿಗೆ ಬುದ್ಧಿವಾದ ಮಾಲೀಕರಿಗೆ ದಂಡ
ಅನಿರೀಕ್ಷಿತ ದಾಳಿ ಬಾಲ ಕಾರ್ಮಿಕರಿಗೆ ಬುದ್ಧಿವಾದ ಮಾಲೀಕರಿಗೆ ದಂಡ
ಶಹಾಪುರಃ ಬಾಲಕಾರ್ಮಿಕ, ತಂಬಾಕು ನಿಷೇಧ ಮತ್ತು ಪ್ಲಾಸ್ಟಿಕ್ ನಿಷೇಧದ ಕುರಿತು ತಾಂಡಾ, ನಗರ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಕೆಲವಡೆ ಅನಿರೀಕ್ಷಿತ ದಾಳಿ ನಡೆಸುವ ಮೂಲಕ ತಪ್ಪಿತಸ್ಥರಿಗೆ ಎಚ್ಚರಿಕೆ ಮತ್ತು ದಂಡವನ್ನು ವಿಧಿಸಲಾಗುತ್ತದೆ ಎಂದು ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾನಿರ್ದೇಶಕ ರಘುವೀರ ಸಿಂಗ್ ತಿಳಿಸಿದರು.
ತಾಲೂಕಿನ ದೋರನಹಳ್ಳಿ, ದೋರನಹಳ್ಳಿ ತಾಂಡಾ, ಮತ್ತು ಹಳಿಸಗರ ವಿಭಾಗದಲ್ಲಿ ಹಲವಾರು ಅಂಗಡಿಗಳ ಮೇಲೆ ದಾಳಿ ನಡೆಸಿ ಬಾಲಕಾರ್ಮಿಕರಿಗೆ ಮತ್ತು ಅವರ ಪಾಲಕರನ್ನು ಕರೆದು ಬುದ್ಧಿವಾದ ಹೇಳಲಾಗಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಇಲ್ಲವಾದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದು, ಅದಕ್ಕೆ ಪಾಲಕರೇ ಹೊಣೆಯಾಗಲಿದ್ದಾರೆ ಎಂದು ತಿಳಿಸಲಾಗಿದೆ.
ಅಲ್ಲದೆ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡ ಆಯ ಅಂಗಡಿ ಮಾಲೀಕರಿಗೆ ಇಲಾಖೆ ನಿಯಮನುಸಾರ ದಂಡ ವಿಧಿಸಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ಸಲಹೆಗಾರರಾದ ಮಹಾಲಕ್ಷ್ಮಿ ಸಜ್ಜನ್, ಆಪ್ತ ಸಮಾಲೊಚಕ ನಟರಾಜ್ ಸೇರಿದಂತೆ ಇತರೆ ಸಿಬ್ಬಂದಿಗಳು ಇದ್ದರು.