ಪ್ರಮುಖ ಸುದ್ದಿಬಸವಭಕ್ತಿ

ಆದಿತ್ಯವಾರ ಅಮಾವಾಸ್ಯೆಃ ಶ್ರೀಮೈಲಾರಲಿಂಗೇಶ್ವರರ ದರ್ಶನ ಪಡೆಯಲು ಹರಸಾಹಸ

ಮೈಲಾರಲಿಂಗೇಶ್ವರ ದೇವಸ್ಥಾನ- ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ಆದಿತ್ಯವಾರ ಅಮಾವಾಸ್ಯೆಃ ಶ್ರೀಮೈಲಾರಲಿಂಗೇಶ್ವರರ ದರ್ಶನ ಪಡೆಯಲು ಹರಸಾಹಸ, ಸಹಸ್ರಾರು ಭಕ್ತರು ಆಗಮನ
ಏಳು ಕೋಟಿಗೇಳ್ ಕೋಟಿಗೆ ಭಕ್ತರ ಭಾವ ಪರವಶ ಜಯಘೋಷ

ಯಾದಗಿರಿ, ಮೈಲಾಪುರಃ ಇಂದು ಆದಿತ್ಯವಾರ ಅಮಾವಾಸ್ಯೆ ಇರುವದರಿಂದ ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಮೈಲಾಪುರ ಶ್ರೀಮೈಲಾರಲಿಂಗೇಶ್ವರರ ದರ್ಶನಕ್ಕೆ ಸಹಸ್ರಾರು ಭಕ್ತರು ಬೆಳಗ್ಗೆಯಿಂದಲೇ ಹರಸಾಹಸ ಪಡುವ ದೃಶ್ಯ ಕಂಡು ಬಂದಿತು.
ಹಲವರು ಕುಟುಂಬ ಸಮೇತ ಆಗಮಿಸಿದರೆ, ಇನ್ನೂ ಕೆಲವರು ಗುಂಪು ಗುಂಪಾಗಿ ಸ್ನೇಹಿತರೊಂದಿಗೆ ಭಕ್ತರು ಏಳು ಕೋಟಿಗಳು ಕೋಟಿಗೆ ಎಂಬ ಸದ್ಘೋಷ ಹಾಕುತ್ತ ಶ್ರೀ ದೇವರ ದರ್ಶನಕ್ಕೆ ಮೆಟ್ಟಿಲೇರಿತ್ತಿದ್ದರು.

ಬಿಸಿಲಿನ‌ ಬೇಗೆ ಬೇರೆ ಆರಂಭದಲ್ಲಿಯೇ ಜಾಸ್ತಿಯಾಗಿದ್ದು, ಭಕ್ತರು‌ ಬಿಸಿಲ ಬೇಗೆ ಲೆಕ್ಕಿಸದೆ ಶ್ರೀದೇವರ ಜಯಘೋಷ ಹಾಕುತ್ತ‌ ಬೆಟ್ಡ ಹತ್ತಿ ಗವಿಯಲಿ ಸಾನಿಧ್ಯಿತನಾದ ಶ್ರೀಮೈಲಾರಲಿಂಗೇಶ್ಚರರ ತಾಳ್ಮೆಯಿಂದ ಭಕ್ತಿಪೂರ್ವಕ ದರ್ಶನ‌ ಪಡೆದರು.

ಆದರೆ ಬಿಸಿಲ ಬೇಗೆಗೆ ಕೆಲವರು ಮಕ್ಕಳು‌ ವೃದ್ಧರು ಹೈರಾಣಾದರು. ಆದರೂ ಭಕ್ತಿ‌ ಭಾವದಿ ಮಿಂದು ದೇವರ ಹೆಸರಲಿ ಜಯಕಾರ ಹಾಕುತು ಸಾಗಿದರು. ಬೆಟ್ಡದ ಮೇಲೆ ಕುಡಿಯುವ ನೀರಿನ‌ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಸಹಸ್ರಾರು ಸಂಖ್ಯೆಯಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ‌ ಕುಡಿಯುವ ನೀರಿನ‌ ತೊಂದರೆ ಅನುಭವಿಸುವಂತಾಗಿದೆ.

ಶ್ರೀಮೈಲಾರಲಿಂಗ ದೇವರು ಯಾವುದೇ ಒಂದು ಸಮುದಾಯಕ್ಕೆ ದೇವರಲ್ಲ ಇಡಿ ಮಾಮವ ಕುಲಕ್ಕೆ ಅವರು ದೇವರಾಗಿದ್ದಾರೆ. ಅದಕ್ಮೆ ಪೂರಕ ಸಾಕ್ಷಿ ಎಂದರೆ ಸಹಸ್ರಾರು ಜನಸಂಖ್ಯೆಯಲ್ಲಿ ಆಗಮಿಸಿದ ಭಕ್ತರಲ್ಲಿ ಎಲ್ಲಾ ಸಮುದಾಯದವರ ಮನೆ ದೇವರಾಗಿದ್ದಾರೆ.

ಸಾಮೂಹಿಕವಾಗಿ ಶ್ರೀದೇವರನ್ನು ಎಲ್ಲರೂ ಭಕ್ತಿ ಪೂರ್ವಕ ವಾಗಿ ಪೂಜಿಸುವ ಭಕ್ತರು ನಾಡಿನಾದ್ಯಂತ ಏಕೆ ದೇಶದಾದ್ಯಂತ ‌ಇರುವದು ಕಂಡು ಬರುತ್ತದೆ. ಸಂಕ್ರಾಂತಿ ವೇಳೆ ಶ್ರೀಮೈಲಾರಲಗರ ಜಾತ್ರೆ ಅತ್ಯದ್ಭುತವಾಗಿ ಲಕ್ಷಾಂತರ ಜನರು ಆಗಮಿಸುತ್ತಾರೆ. ಜಾತ್ರಾ ಸಂದರ್ಭ ಹಿಂದೆ ಬೆಟ್ಟದ ಮೇಲಿಂದ ಕುರಿ ಮರಿಗಳನ್ನು ದೇವರ ಹೆಸರಲಿ ಆರಿಸುವ ಪರಿ ಪದ್ಧತಿ ಇತ್ತು.
ಅದು ಮೌಢ್ಯ ಆಚರಣೆ ಎಂಬ ಕಾರಣಕ್ಕೆ ಕಾನೂನಾತ್ಮಕವಾಗಿ ಕಳೆದ ಐದಾರು ವರ್ಷದಿಂದ ಈ ಪದ್ಧತಿ ಸ್ಥಗಿತಗಿಸಲಾಗಿದೆ‌

ನಂಬಿದ ಭಕ್ತರಿಗೆ ಕೈಬಿಡದ ಕಲಿಯುಗದ ದೇವರು ಶ್ರೀಮೈಲಾರಲಿಂಗೇಶ್ವರರು ಎಂಬ ನಂಬಿಕೆ ಭಕ್ತರಲ್ಲಿ ಬೇರೂರಿದೆ ಹೀಗಾಗಿ ಅಸಂಖ್ಯಾತ ಭಕ್ತರು ಯಾವುದೇ ಜಾತಿ ಬೇಧವಿಲ್ಲದೆ ಧರ್ಮಬೇಧವಿಲ್ಲದೆ ಇಲ್ಲಿಗೆ ಆಗಮಿಸುತ್ತದೆ.

ಯಾದಗಿರಿ‌ ಜಿಲ್ಲೆಯ ಮೈಲಾಪುರದ ಶ್ರೀಮೈಲಾರಲಿಂಗೇಶ್ವರರ ದೇವಸ್ಥಾನದಲ್ಲಿ ಇಂದು  ಅಮಾವಾಸ್ಯೆ ದರ್ಶನ‌ ಪಡೆಯಲು ಹೋಗಿದ್ದೇವು. ಅಸಂಖ್ಯಾತ ಭಕ್ತರು ಆಗಮಿಸಿದ್ದರು. ಆದರೆ ಭಕ್ತರಿಗೆ ಅಲ್ಲಿ ಮೂಲ ಸೌಲಭ್ಯ ಕೊರತೆ ಎದ್ದು ಕಾಣುತಿತ್ತು. ಜಿಲ್ಲಾಡಳಿತ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.

– ಡಾ.ಆನಂದಕುಮಾರ‌ ಗುತ್ತೇದಾರ, ನೀಲಕಂಠ ಕಡಗಂಚಿ, ಉಮೇಶ ಗುತ್ತೇದಾರ (ಮದ್ರಿಕಿ) ಮತ್ತು ರಮೇಶ ನಗನೂರ. (ಭಕ್ತಾಧಿಗಳು)

Related Articles

Leave a Reply

Your email address will not be published. Required fields are marked *

Back to top button