ಪ್ರಮುಖ ಸುದ್ದಿ
ಲಾರಿ-ಬೈಕ್ ಡಿಕ್ಕಿ ಓರ್ವನ ಸಾವು
ಲಾರಿ-ಬೈಕ್ ಡಿಕ್ಕಿ ಓರ್ವನ ಸಾವು
ಯಾದಗಿರಿಃ ಲಾರಿ ಮತ್ತು ಬೈಕ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗಿನ ಜಾವ ತಾಲೂಕಿನ ನಾಯ್ಕಲ್ ಗ್ರಾಮದ ಪೆಟ್ರೋಲ್ ಪಂಪ್ ಹತ್ತಿರ ನಡೆದಿದೆ.
ಲಾರಿಗೆ ಎದುರಾದ ಬೈಕ್ ಗೆ ಡಿಕ್ಕಿ ಹೊಡೆಯುವದಲ್ಲದೆ ಪಕ್ಕದ ಗದ್ದೆಯಲ್ಲಿ ನಿಂತಿದ್ದ ಟ್ರಾಕ್ಟರಗೆ ಲಾರಿ ಡಿಕ್ಕಿ ಹೊಡೆದುಕೆಸರು ಗದ್ದೆಯಲ್ಲಿ ನಿಂತಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ತಿಳಿಸಿದರು.
ಅಪಘಾತದಲ್ಲಿ ಬೈಕ್ ಸವಾರ ಈರಣ್ಣ ಬಡಿಗೇರ(33) ಮೃತ ಪಟ್ಟದುರ್ದೈವಿಯಾಗಿದ್ದು, ಈತ ಶಹಾಪುರ ತಾಲೂಕಿನ ತಡಿಬಿಡಿ ಗ್ರಾಮ ನಿವಾಸಿ ಎನ್ನಲಾಗಿದೆ.
ಸ್ವಗ್ರಾಮಕ್ಕೆ ತೆರಳುತ್ತಿರುವ ಸಂದರದಭ ಈ ದುರ್ಘಟನೆ ನಡೆದಿದೆ.
ಈ ಕುರಿತು ವಡಿಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.