ಕಠಿಣ ಪರಿಶ್ರಮದಿಂದ ಉನ್ನತ ಹುದ್ದೆ ಪಡೆಯಲು ಸಾಧ್ಯ-ಇಜೇರಿ
ಯಾದಗಿರಿ, ಶಹಾಪುರಃ ಪ್ರಸ್ತುತ ಸ್ಪರ್ಧಾತ್ಮಕ ಯುಗವಾಗಿದ್ದು, ಯುವಕರು ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿದೆ ಎಂದು ಬಸವಮಾರ್ಗ ಪ್ರತಿಷ್ಠಾನದ ಸಂಚಾಲಕ ಶಿವಣ್ಣ ಇಜೇರಿ ತಿಳಿಸಿದರು.
ನಗರ ಸಮೀಪದ ಭೀಮರಾಯನ ಗುಡಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಹಪಠ್ಯ, ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಎನ್ನೆಸ್ಸೆಸ್ಸ್ ನ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಾಲ್ಯದಿಂದಲೇ ಮಕ್ಕಳು ಶಾಲಾ ಪಠ್ಯದ ಜೊತೆಗೆ ಸಾಹಿತ್ಯಕವಾದ ಪುಸತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಪಡೆಯಬೇಕು. ಬರಿ ಪುಸ್ತಕದ ಉಳುವಾಗುವದಕ್ಕಿಂತ ಜನರಲ್ ಜ್ಞನವು ಅತ್ಯಗತ್ಯವಿದೆ. ದೇಶದ ಇತಿಹಾಸ, ಸಂಶೋಧನಾತ್ಮಕ ಬರಹಗಳು ಕುರಿತು ಅಧ್ಯಯನ ಮಾಡುವ ಮೂಲಕ ಕನಿಷ್ಠ ಜ್ಞಾನ ಹೊಂದಿರಬೇಕು. ತಾವೂ ವಾಸಿಸುತ್ತಿರುವ ಸುತ್ತಲಿನ ಇತಿಹಾಸವಾದರೂ ಸಮರ್ಪಕವಾಗಿ ಸಂಕ್ಷಿಪ್ತವಾಗಿ ತಿಳಿದಿರಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗುರುಲಿಂಗಪ್ಪ ಮಿಣಜಿಗಿ ಮಾತನಾಡಿ, ಇಂದಿನ ಯುವಕರಲ್ಲಿ ನೈತಿಕ ಮೌಲ್ಯಗಳ ಕೊರತೆ ಕಂಡು ಬರುತ್ತಿದ್ದು, ಪ್ರೀತಿ ಸಹಬಾಳ್ವೆ ಸಹಕಾರ ದೇಶಪ್ರೇಮ ಇತ್ಯಾದಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶಕ್ಕೆ ಮಾದರಿ ಪ್ರಜೆಗಳಾಗಿ ಬಾಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಗುಂಡೇಕಾರ ರಾಮಚಂದ್ರರಾವ ಅಧ್ಯಕ್ಷತೆವಹಿಸಿದ್ದರು. ಭೀ.ಗುಡಿ ನೌಕರರ ಸಂಘದ ಅಧ್ಯಕ್ಷ ಮಾನಪ್ಪಗೌಡ ಕಮತರಡ್ಡಿ, ವಿದ್ಯಾರ್ಥಿನಿ ಸ್ನೇಹಾ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು.
ಉಪನ್ಯಾಸಕ ಡಾ.ರವಿಂದ್ರನಾಥ ಹೊಸ್ಮನಿ ಸ್ವಾಗತಿಸಿದರು. ಪಂಪಾಪತಿ ಶಿರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ನೆಸ್ಸೆಸ್ಸೆ ಯೋಜನಾಧಿಕಾರಿ ದೇವಿಂದ್ರಪ್ಪ ಮಡಿವಾಳಕರ್ ನಿರೂಪಿಸಿದರು. ಸೋಮಶೇಖರ ಜಾಗಟೆ ವಂದಿಸಿರು. ಇದೇ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿದ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಎಂ.ಎಸ್.ಬಿರಾದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.