ಶಹಾಪುರಃ ನಿವೇಶನ ಹಂಚಿಕೆ ಗೊಂದಲ, ರದ್ದತಿಗೆ ಆಗ್ರಹಿಸಿ ಬಿಜೆಪಿ ಆಹೋರಾತ್ರಿ ಧರಣಿ
ನಗರಸಭೆ ಅಧಿಕಾರಿಗಳ ವಿರುದ್ಧ ಬಿಜೆಪಿ ಸದಸ್ಯರ ಆಕ್ರೋಶ
ಶಹಾಪುರಃ ನಿವೇಶನ ಹಂಚಿಕೆ ಗೊಂದಲ, ರದ್ದತಿಗೆ ಆಗ್ರಹಿಸಿ ಬಿಜೆಪಿ ಆಹೋರಾತ್ರಿ ಧರಣಿ
ನಗರಸಭೆ ಅಧಿಕಾರಿಗಳ ವಿರುದ್ಧ ಬಿಜೆಪಿ ಸದಸ್ಯರ ಆಕ್ರೋಶ
ಯಾದಗಿರಿ, ಶಹಾಪುರಃ ಇಂದು ಎಲ್ಲವೂ ಸುಲಲೀತವಾಗಿ ನಡೆದಲ್ಲಿ ಆಶ್ರಯ ನಿವೇಶನ ಹಂಚಿಕೆ ಲಾಟರಿ ಮೂಲಕ ವಿತರಣೆ ಕಾರ್ಯಕ್ರಮ ನಡೆಯಬೇಕು.
ಆದರೆ, ನಿನ್ನೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಇಲ್ಲಿನ ಬಿಜೆಪಿ ನಗರಸಭೆ ಸದಸ್ಯರು ಲಾಟರಿ ಮೂಲಕ ಆಯ್ಕೆ ಮಾಡುವ ಫಲಾನುಭವಿಗಳ ಪಟ್ಟಿ ವಿಪಕ್ಷ ಸದಸ್ಯರಾದ ನಮಗೆ ನೀಡುತ್ತಿಲ್ಲ ಅಲ್ಲದೆ ನಮಗೆ ಯಾವುದೇ ಮಾಹಿತಿಯು ನೀಡಿರುವದಿಲ್ಲ ಕೂಡಲೇ ಲಾಟರಿಯಲ್ಲಿ ಯಾವ್ಯಾವ ಫಲಾನುಭವಿಗಳ ಒಟ್ಟು ಎಷ್ಟು ಜನರ ಹೆಸರು ಹಾಕಲಾಗುತ್ತದೆ ಎಂಬ ಮಾಹಿತಿ ಪಟ್ಟಿ ನಮಗೆ ನೀಡಬೇಕು.
ಈ ದಿನದವರೆಗೂ ನಮಗೆ ಮಾಹಿತಿ ನೀಡುತ್ತಿಲ್ಲ. ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರು ಫಲಾನುಭವಿ ಪಟ್ಟಿ ನೀಡಿರುವದಿಲ್ಲ.
ಅಲ್ಲದೆ ನಗರಸಭೆ ನೋಟಿಸ್ ಬೋರ್ಡ್ ಗೂ ಲಗತ್ತಿಸಿರುವದಿಲ್ಲ. ಹೀಗಾಗಿ ಆಶ್ರಯ ನಿವೇಶನ ಹಂಚಿಕೆ ರದ್ದುಗೊಳಿಸಬೇಕು. ಪೌರಾಯುಕ್ತ ಓಂಕಾರ ಪೂಜಾರಿಯವರ ಸಂಪೂರ್ಣ ನಿರ್ಲಕ್ಷವಿದ್ದು, ಕಾಂಗ್ರೆಸ್ ಸದಸ್ಯರ ಕೈಗೊಂಬೆಯಾಗಿದ್ದಾರೆ ಎಂದು ಬಿಜೆಪಿ ಧರಣಿನಿರತ ನಗರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಬಿಜೆಪಿ ನಗರಸಭೆ ವಿಪಕ್ಷ ನಾಯಕ ಲಾಲನಸಾಬ ಖುರೇಶಿ, ರವಿ ನರಸನಾಯಕ, ಮಲ್ಲಿಕಾರ್ಜುನ ಗಂಧದಮಠ, ಅಪ್ಪಣ್ಣ ದಶವಂತ, ಅಮರೇಶ ನಂದಿಕೋಲ, ಅಶೋಕ ನಾಯಕ ಸೇರಿದಂತೆ ಇತರರು ಭೇಟಿಯಾಗಿ ದೂರು ಸಲ್ಲಿಸಿದ್ದು, ಜಿಲ್ಲಾಧಿಕಾರಿಯವರು ಕೂಡಲೇ ಫಲಾನುಭವಿಗಳ ಪಟ್ಟಿ ನೀಡುವಂತೆ ಪೌರಾಯುಕ್ತರಿಗೆ ತಿಳಿಸಿದ್ದು, ಅಲ್ಲದೆ ನಗರಸಭೆ ನೋಟಿಸ್ ಬೊರ್ಡ್ ಗೆ ಲಗತ್ತಿಸಲು ಸೂಚನೆ ನೀಡಿದರು. ಆದಾಗ್ಯ ನಿನ್ನೆ ನಗರಸಭೆ ಪೌರಾಯಕ್ತರು ಫಲಾನುಭವಿಗಳ ಪಟ್ಟಿ ನೀಡದೆ ಜಾರಿಕೊಂಡಿದ್ದಾರೆ.
ಹೀಗಾಗಿ ಲಾಟರಿ ಆಯ್ಕೆಯಲ್ಲಿ ಗೊಂದಲವಿದ್ದು, ಕೂಡಲೇ ನಿವೇಶನ ಹಂಚಿಕೆ ಕಾರ್ಯಕ್ರಮ ಮುಂದೂಡಬೇಕು. ಪಾರದರ್ಶಕವಾಗಿ ಫಲಾನುಭವಿಗಳ ಪಟ್ಟಿ ನಗರಸಭೆ ಬೋರ್ಡ್ಗೆ ಲಗತ್ತಿಸುವ ಮೂಲಕ ಅರ್ಹರಿಗೆ ನಿವೇಶನ ಹಂಚಿಕೆ ವಿತರಣೆಯಾಗಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.
ನಿನ್ನೆಯಿಂದ ನಗರಸಭೆ ಮುಂದೆ ಬಿಜೆಪಿಯ 12 ಜನ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರು ಇತರರು ಧರಣಿಯಲ್ಲಿ ಭಾಗವಹಿಸಿದ್ದಾರೆ.