ಪ್ರಮುಖ ಸುದ್ದಿ
116 ದಿನ ಜೈಲುವಾಸದ ಬಳಿಕ ಶಾಸಕ ಹ್ಯಾರಿಸ್ ಪುತ್ರ ಮಹ್ಮದ್ ನಲಪಾಡ್ ಗೆ ಬೇಲು!
ಬೆಂಗಳೂರು : ನಗರದ ಫರ್ಜಿ ಕೆಫೆಯಲ್ಲಿ ವಿದ್ವತ್ ಎಂಬ ಯುವಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪುತ್ರ ಮಹ್ಮದ್ ನಲಪಾಡ್ ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
2 ಲಕ್ಷ ರೂಪಾಯಿಯ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದಿದೆ. ಅಂತೆಯೇ ಸಾಕ್ಷ್ಯಾಧಾರ ನಾಶಕ್ಕೆ ಯತ್ನಿಸಿದಂತೆ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ. ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ. ಹೀಗಾಗಿ, ಮಹ್ಮದ್ ನಲಪಾಡ್ 116 ದಿನಗಳ ಜೈಲುವಾಸದಿಂದ ಹೊರ ಬಂದಂತಾಗಿದೆ.