ಪ್ರಮುಖ ಸುದ್ದಿ
ಮೋದಿ ಪ್ರಮಾಣ ವಚನ-ಕ್ಯಾಂಟೀನ್ ನಲ್ಲಿ ಉಚಿತ ಊಟ
ಮೋದಿ ಕ್ಯಾಂಟೀನ್ನಲ್ಲಿ ಉಚಿತ ಊಟ
ಶಹಾಪುರಃ ಚೌಕಿದಾರ ನರೇಂದ್ರ ಮೋದಿಜಿಯವರು ಮೇ.30 ರಂದು ದೇಶದ ಪ್ರಧಾನಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಶುಭ ಸಂದರ್ಭದಲ್ಲಿ ನಗರದ ಬಸವೇಶ್ವರ ವೃತ್ತದ ಸಮೀಪ ಇರುವ ನಮೋ ಕ್ಯಾಂಟೀನ್ ನಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಲೀಕರಾದ ಮಂಜುನಾಥ ಗಣಾಚಾರಿ ಹಾಗೂ ಇತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ.30 ರಂದು ನಮೋ ಅಭಿಮಾನಿಗಳಿಗೆ ಹಬ್ಬದ ದಿನವಿದ್ದಂತೆ, ಆ ಸಂತಸದ ಕ್ಷಣವನ್ನು ನಮೋ ಕ್ಯಾಂಟೀನ್ಗೆ ಆಗಮಿಸಿ ಊಟವನ್ನು ಸವಿದು ಪರಸ್ಪರರು ಸಂತಸವನ್ನು ಹಂಚಿಕೊಳ್ಳುವ.. ತಾವೂ ಬನ್ನಿ ಎಂದು ಕ್ಯಾಂಟೀನ್ ಮಾಲೀಕರು ಕರೆ ನೀಡಿದ್ದಾರೆ. ಮೇ. 30 ರಂದು ಮೋದಿ ಊಟಕ್ಕೆ ಯಾವುದೇ ಹಣ ಪಡೆಯುವದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.