ಪ್ರಮುಖ ಸುದ್ದಿ

ನಮೋಶಿ ಗೆಲುವು ಖಚಿತಃ ಗುರು ಕಾಮಾ

ಕಲ್ಬುರ್ಗಿಃ ಈಶಾನ್ಯ ಶಿಕ್ಷಕರ ಕ್ಷೇತ್ರ‌ ಚುನಾವಣಾ ಮತ ಎಣಿಕೆ ಕಾರ್ಯ ನಡೆದಿದ್ದು, ಅದರಲ್ಲಿ ಮೊದಲ ಪ್ರಾಶಸ್ತ್ಯದ‌ ಒಟ್ಟು ಮತಗಳ ಚಲಾವಣೆಯಲ್ಲಿಯೇ 1771 ಅಂತರ ಕಾಯ್ದುಕೊಂಡ ಬಿಜೆಪಿ ಗೆಲುವು ಬಹುತೇಕ ಖಚಿತವೆಂದು ಗುರು ಎಸ್.ಕಾಮಾ ಯಾದಗಿರಿ ಜಿಲ್ಲಾ‌ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯವಾಣಿಗೆ ತಿಳಿಸಿದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಪ್ರಥಮ‌ ಪ್ರಾಶಸ್ತ್ಯದ ಒಟ್ಟು 14000 ಮತ ಎಣಿಕೆ ಕಾರ್ಯ ಮುಗಿದಿದೆ. ಅದರಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರು 1771 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಒಟ್ಟು 21,437 ಮತಗಳು ಚಲಾವಣೆಯಾಗಿದ್ದು,‌ ಅದರಲ್ಲಿ ಮೊದಲ ಪ್ರಾಶಸ್ತ್ಯ ದ ಒಟ್ಟು 14,000 ಮತಗಳ ಎಣಿಕೆ ಪೂರ್ಣಗೊಂಡಿದೆ. ಎರಡನೇ ಪ್ರಾಶಸ್ತ್ಯದ ಮತಗಳ‌ ಎಣಿಕೆ ಮುಂದುವರೆದಿದೆ‌ ಎಂದು ಅವರು ಮಾಹಿತಿ ನೀಡಿದ್ದಾರೆ.

ಮತಗಳ ವಿವರ:
ತಿಮ್ಮಯ್ಯ ಪುರ್ಲೆ(ಜೆ.ಡಿ‌.ಎಸ್)-2353
ಶರಣಪ್ಪ ಮಟ್ಟೂರು (ಕಾಂಗ್ರೆಸ್)-4271
ಶಶೀಲ ಜಿ. ನಮೋಶಿ(ಬಿ.ಜೆ.ಪಿ)-6042
ವಾಟಾಳ ನಾಗರಾಜ( ವಾಟಾಳ ಪಕ್ಷ)-39
ಡಾ.ಚಂದ್ರಕಾಂತ ಸಿಂಗೆ(ಇಂಡಿಪೆಂಡೆಂಟ್)-54
Valid Votes-12759
Invalid Votes-1241

Related Articles

Leave a Reply

Your email address will not be published. Required fields are marked *

Back to top button