ಗುಳಿ ಕೆನ್ನೆ ಹುಡುಗಿ ಮನೆಯಲ್ಲಿ ಮದುವೆ ಸಂಭ್ರಮ.!
ವಿದೇಶಿ ಹುಡುಗನ ಜೊತೆ ನಂದಿನಿ ಮದುವೆ ಫಿಕ್ಸ್.!
ವಿವಾ ಡೆಸ್ಕ್ ಃ ಸ್ಯಾಂಡಲ್ ವುಡ್ ಗುಳಿ ಕೆನ್ನೆ ಹುಡುಗಿ ರಚಿತಾ ರಾಮ್ ಮನೆಯಲ್ಲಿ ಮದುವೆ ಸಂಭ್ರಮ ಸಡಗರ ಶುರುವಾಗಿದೆ ಎಂದು ಇಡಿ ಗಾಂಧಿ ನಗರದಲ್ಲಿ ಸುದ್ದಿ ಹಬ್ಬಿದೆ.
ಹೌದು ನಿಜ ಮದುವೆ ಏನೋ ನಡೆಯುತ್ತಿದೆ. ಅದು ರಚಿತಾ ರಾಮ್ ಎಂಬ ಗುಳಿ ಕೆನ್ನೆ ಚಲುವೆ ಮದುವೆಗೆ ರೆಡಿಯಾಗುತ್ತಿದ್ದಾಳ..? ಹುಬ್ಬೇರಿಸಬೇಡಿ ಈ ಕುರಿತು ಎಲ್ಲವನ್ನು ತಿಳಿಸುವೆವು ಜಸ್ಟ್ ವೇಟ್..ಆಂಡ್ ಓದಿ.
ಡಿಂಪಲ್ ರಾಣಿ ರಚಿತಾ ರಾಂಗೆ ಏನಾಯಿತು ಕೈತುಂಬಾ ಸಿನಿಮಾಗಳು ಮತ್ತು ರಿಯಾಲಿಟಿ ಶೋ ಇಟ್ಟುಕೊಂಡು ಮದುವೆ ಆಗುತ್ತಿದ್ದಾರಾ..? ಎಂದೆನಿಸುತ್ತಿದೆಯೇ..ತಪ್ಪಿಲ್ಲ ಬಿಡಿ.
ಮದುವೆ ರಚಿತಾ ರಾಮ್ ಮನೆಯಲ್ಲಿರೋದು ನಿಜ. ಆದರೆ ಡಿಂಪಲ್ ಕ್ವೀನ್ ರಚಿತಾಳ ಮದುವೆ ಅಲ್ಲ. ಅವಳ ಮುದ್ದಿನ ಸಹೋದರಿ(ಅಕ್ಕ) ನಿತ್ಯ ರಾಮ್ ಇವಳು ‘ನಂದಿನಿ’ ದಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿರುವ ನಿತ್ಯಾರಾಮ್ ರಾಜ್ಯಾದಾದ್ಯಂತ ಖ್ಯಾತಿಯನ್ನು ಪಡೆದಿದ್ದಾಳೆ. ಅದೇ ರೀತಿ ‘ಬೆಂಕಿಯಲ್ಲಿ ಅರಳಿದ ಹೂ’ ‘ಕರ್ಪೂರದ ಹೂ’ ರಾಜಕುಮಾರಿ ಹಾಗೂ ಎರಡು ಕನಸು ಧಾರಾವಾಹಿ ಹಾಗೂ ಮುದ್ದು ಮನಸು ಚಿತ್ರದಲ್ಲಿ ಅವರು ಅಭಿನಯಿಸಿದ್ದಾರೆ.
ರಚಿತಾ ರಾಮ್ ಅವರ ಅಕ್ಕ ನಿತ್ಯಾ ರಾಮ್ ಅವಳ ಮದುವೆ ಇದೇ ಡಿಸೆಂಬರ್ 5-6 ರಂದು ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಖಸೆಂಬರ್‍ನಲ್ಲಿ ದಾಂಪತ್ಯ ಜೀವನಕ್ಕೆ ನಿತ್ಯಾ ಕಾಲಿಡಲಿದ್ದಾರೆ. ಹುಡುಗ ಆಸ್ಟ್ರೇಲಿಯಾದಲ್ಲಿ ವಾಸವಿದ್ದು, ಅಲ್ಲಿಯೇ ಉದ್ಯಮಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ನಿತ್ಯಾ ರಾಮ್ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗುತ್ತಾರೆ ಎಂಬ ಸುದ್ದಿ ಎಲ್ಲಡೆ ಹರಡಿದೆ.