ಪ್ರಮುಖ ಸುದ್ದಿ

ಸಣ್ಣ ಸಮುದಾಯಗಳ ನೋವಿಗೆ ಸ್ಪಂಧಿಸುವ ಗುಣವಿರಲಿ-ಪ್ರಣವಾನಂದ ಶ್ರೀ

ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ

ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ

ಸಣ್ಣ ಸಮುದಾಯಗಳ ನೋವಿಗೆ ಸ್ಪಂಧಿಸುವ ಗುಣವಿರಲಿ-ಪ್ರಣವಾನಂದ ಶ್ರೀ

yadgiri, ಶಹಾಪುರಃ ಯಾರೇ ಆಗಿರಲಿ ನೊಂದವರಿಗೆ, ನೋವಿಗೆ ಸ್ಪಂಧಿಸುವ ಗುಣ ನಾಯಕರಾದವರಿಗೆ ಇರಬೇಕು. ಅಂತಹವರು ಮಾತ್ರ ಬೆಳೆಯಲು ಸಾಧ್ಯವಿದೆ. ಅದರಲ್ಲೂ ಅಸಹಾಯಕರಿಗೆ, ಸಣ್ಣ ಸಮುದಾಯಗಳ ನೋವಿಗೆ, ಕಷ್ಟಕ್ಕೆ ಸ್ಪಂಧಿಸುವವರನ್ನು ಬೆಂಬಲಿಸಬೇಕು ಎಂದು ಆರ್ಯ ಈಡಿಗ ಸಮಾಜದ ಚಿತಾಪುರದ ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.

ನಗರದ ಚರಬಸವೇಶ್ವರ ಕಲ್ಯಾಣ ಮಂಪಟದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮುದಾಯದ ಸಂಘಟನೆ, ವೇದಿಕೆಯನ್ನು ಬಳಸಿಕೊಳ್ಳಬೇಡಿ. ಯಾರು ನಮ್ಮ ಸಮುದಾಯದ ನೋವಿಗೆ ಆಗದವರನ್ನು ಬೆಂಬಲಿಸಿ ಅವರೊಂದಿಗೆ ತಾವೂ ಸಹ ಕಾರ್ಯಕ್ರಮ ಮಧ್ಯ ಎದ್ದು ಹೋಗುವದು ಎಷ್ಟರ ಮಟ್ಟಿಗೆ ಲೇಸು. ಅಂತವರೆಂದಿಗೂ ಸಮುದಾಯದ ಒಳಿತಿಗೆ ಶ್ರಮಿಸುವದಿಲ.್ಲ ಅವರೆಲ್ಲ ತಮ್ಮ ಸ್ವಾರ್ಥತೆಗೆ ಸಮುದಾಯದ ವೇದಿಕೆ ಬಳಸಿಕೊಳ್ಳುತ್ತಾರೆ. ಅಂತವರಿಗೆ ಸಮುದಾಯದ ಸಂಘಟನೆಯಲ್ಲಿ ವೇದಿಕೆಯಲ್ಲಿ ಸ್ಥಾನಮಾನ ಕಲ್ಪಿಸಬಾರದು.

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ನಡೆಯಬೇಕು. ಅವರು ತೋರಿದ ಸನ್ಮಾರ್ಗದಲ್ಲಿ ನಾವೆಲ್ಲ ನಡೆಯಬೇಕಿದೆ. ಹಲವಾರು ವರ್ಷಗಳಿಂದ ಯಾವುದೇ ಪಕ್ಷದ ಆಡಳಿತವಿರಲಿ, ಆಯಾ ಸಿಎಂರನ್ನ ಭೇಟಿ ಮಾಡಿ, ಆರ್ಯ ಈಡಿಗ ಸಮಾಜದ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಮಂಡಳಿಗೆ 500 ಕೋಟಿ ಅನುದಾನ ಕಲ್ಪಿಸಲು ಮನವಿ ಮಾಡುತ್ತಲೇ ಬಂದಿದ್ದೇವೆ. ಇಲ್ಲಿವರೆಗೂ ಯಾರೊಬ್ಬ ಜನಪ್ರತಿನಿಧಿಯೂ ಆಶಾ ಭಾವನೆ ಸಹ ಹುಟ್ಟು ಹಾಕಿರುವದಿಲ್ಲ ಎಂದು ಕಿಡಿ ಕಾರಿದರು.

ಕರಾವಳಿ ಭಾಗದಲ್ಲಿ ಆರ್ಯ ಈಡಿಗ ಸಮಾಜ ದೊಡ್ಡ ಪ್ರಮಾಣದಲ್ಲಿ ಸಂಖ್ಯೆಯನ್ನು ಹೊಂದಿದೆ. ಆ ಭಾಗದಲ್ಲಿ ಶಾಸಕರು, ಸಚಿವರು ಇದ್ದಾರೆ. ಆದರೂ ಸಮುದಾಯದ ಏಳ್ಗೆಗೆ ಧ್ವನಿ ಎತ್ತುತ್ತಿಲ್ಲ. ಕಕ ಭಾಗದ ಸಮುದಾಯ ಜಾಗೃತರಾಗಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಸಮಾಜ ಬೆಳೆಯಲು ಸಾಧ್ಯವಿದೆ. ಸಮಾಜದ ಕಟ್ಟಕಡೆಯವರನ್ನು ಗುರುತಿಸಿ ಸಹಾಯ ಸಹಕಾರ ನೀಡುವಂತ ಕೆಲಸವಾಗಬೇಕು ಎಂದರು.

ಮುಖಂಡರಾದ ಅಮೀನರಡ್ಡಿ ಪಾಟೀಲ್ ಯಾಳಗಿ, ಶರಣಪ್ಪ ಸಲಾದಪುರ, ಚಂದ್ರಶೇಖರ ಮಾಗನೂರ ಮಾತನಾಡಿದರು. ಉಪನ್ಯಾಸಕಿ ಹಣಮಂತಿ ಗುತ್ತೇದಾರ ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದರು. ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ ಅಧ್ಯಕ್ಷತೆವಹಿಸಿದ್ದರು. ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರ, ಮಲ್ಲಿಕಾರ್ಜುನ ಕಡೇಚೂರ, ಹುಣಸಗಿ ಸಮಾಜ ಅಧ್ಯಕ್ಷ ಬಸಯ್ಯ ಗುತ್ತೇದಾರ, ಟಿಎಚ್‍ಓ ಡಾ.ರಮೇಶ ಗುತ್ತೇದಾರ, ಕಲ್ಬುರ್ಗಿ ಸಮಾಜದ ಜಿಲ್ಲಾಧ್ಯಕ್ಷ ರಾಜೇಶ ಗುತ್ತೇದಾರ, ಕಾನಿಪ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಡಾ.ಆನಂದಕುಮಾರ ಗುತ್ತೇದಾರ (ಕರಕಳ್ಳಿ), ಉಮೇಶ ಕಟ್ಟಿಮನಿ ಮದ್ರಿಕಿ, ಪತ್ರಕರ್ತ ಕುಮಾರಸ್ವಾಮಿ ಕಲಾಲ್, ಕಾಶಿನಾಥ ಗುತ್ತೇದಾರ ಇತರರು ಉಪಸ್ಥಿತರಿದ್ದರು. ಮುಂಚಿತವಾರ ನಗರದ ಪ್ರಮುಖ ಬೀದಿಗಳ ಮೂಲಕ ನಾರಾಯಣ ಗುರುಗಳ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

Related Articles

Leave a Reply

Your email address will not be published. Required fields are marked *

Back to top button