ಪ್ರಮುಖ ಸುದ್ದಿ
ಕೃಷಿ ಮೇಳಃ ಶಿವಣ್ಣನ ಟಗರು ಡ್ಯಾನ್ಸ್ ಗೆ ಸಾಥ್ ನೀಡಿದ ಅಭಿಮಾನಿಗಳು
ಕೃಷಿ ಮೇಳಃ ಶಿವಣ್ಣನ ಟಗರು ಡ್ಯಾನ್ಸ್ ಗೆ ಸಾಥ್ ನೀಡಿದ ಅಭಿಮಾನಿಗಳು
ದಾವಣಗೆರೆಃ ಹೊನ್ನಾಳಿಯ ಹಿರೆಕಲ್ಮಠದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ಭಾಗವಹಿಸಿದ್ದ ನಟ ಶಿವರಾಜಕುಮಾರ ವೇದಿಕೆ ಮೇಲೆ ಅಭಿಮಾನಿಗಳ ಒತ್ತಾಯಕ್ಕೆ ಟಗರು ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ರಂಜಿಸಿದರು.
ಶಿವಣ್ಣನ ಸ್ಟೆಪ್ ಗೆ ಫಿದಾ ಆದ ಜನ ಕೇಕೆ ಹಾಕಿ ಸಂತೋಷ ವ್ಯಕ್ತಪಡಿಸಿದರೆ, ಅವರ ಅಭಿಮಾನಿಗಳು ಸ್ಟೆಪ್ ಹಾಕುವ ಮೂಲಕ ನೆಚ್ಚನ ನಟನಿಗೆ ಸಾಥ್ ನೀಡಿದರು. ನಂತರ ಯೋಗ ಗುರು ಬಾಬಾ ರಾಮದೇವ್ ನಡೆಸಿಕೊಟ್ಟ ಯೋಗದಲ್ಲಿ ಭಾಗವಹಿಸಿ ಯೋಗಭ್ಯಾಸ ಮಾಡಿದರು.