ಕಂಪನಿ ಸಹಾಯಾರ್ಥವಾಗಿ ‘ಸೈನಿಕನ ಹೆಂಡತಿ’ ನಾಟಕ ಪ್ರದರ್ಶನ
ಯಾದಗಿರಿ, ಶಹಾಪುರಃ ನಗರದ ಚರಬಸವೇಶ್ವರ ಗದ್ದುಗೆ ಕಲ್ಯಾಣ ಮಂಟಪದಲ್ಲಿ ಶ್ರೀ ಗುರುಪಾದಲಿಂಗೇಶ್ವರ ನಾಟ್ಯ ಸಂಘ (ರಿ) ಮುತ್ತಂಗಿ ಇವರಿಂದ ಸುಂದರ ನಾಟಕ ‘ಸೈನಿಕನ ಹೆಂಡತಿ’ ಇದೇ ಅಕ್ಟೋಬರ್ 22 ಮತ್ತು 23 ರಂದು ಮದ್ಯಾಹ್ನ 3-15 ಮತ್ತು ಸಂಜೆ 6-15 ಕ್ಕೆ ಎರಡು ದಿನ ಪ್ರದರ್ಶನಗೊಳ್ಳಲಿದೆ.
ಇದು ಕಂಪನಿ ಸಹಾಯಾರ್ಥವಾಗಿ ನಾಟಕ ಪ್ರದರ್ಶನ ವಿದ್ದು, ದಯವಿಟ್ಟು ನಿಗದಿತ ಸಮಯಕ್ಕೆ ಆಗಮಿಸಿ ಟಿಕೆಟ್ ದರ 150 ರೂ. ಕೊಟ್ಟು ನಾಟಕ ನೋಡಿ ಕಲಾವಿದರಿಗೆ ತನುಮನಧನದಿಂದ ಸಹಕರಿಸಬೇಕೆಂದು ನಾಟಕ ಕಂಪನಿ ಮಾಲೀಕರಾದ ಲಕ್ಷ್ಮಣರಾವ್ ಸಿ.ಎಚ್. ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಕನ್ನಡಪರ ಸಂಘಟನೆ ಕೈ ಜೋಡಿಸಲಿಃ ಪ್ರಸ್ತುತ ಕಾಲಘಟ್ಟದಲ್ಲಿ ಕಲಾವಿದರ ಬದುಕು ದುಸ್ತರವಾಗಿದೆ. ಇಂತಹ ಸಮಯದಲ್ಲಿ ಕಲಾ ಆಸಕ್ತರು, ವಿಶೇಷವಾಗಿ ಸಗರನಾಡಿನ ಜನತೆ ನಮ್ಮೂರಿನಲ್ಲಿ ಸಹಾಯಾರ್ಥವಾಗಿ ನಾಟಕ ಪ್ರದರ್ಶನ ಮಾಡುತ್ತಿರುವ ಕಲಾವಿದರನ್ನು ನಿರಾಸೆಗೊಳಿಸದೆ, ಅವರ ಕಲೆಗೆ ಬೆಲೆ ನೀಡುವ ಮೂಲಕ ನಾವೆಲ್ಲ ಕೈಲಾದ ಸಹಾಯ ಸಹಕಾರ ನೀಡೋಣ.
ಅವರವರ ಸ್ನೇಹ ಬಳಗದೊಂದಿಗೆ ವಿಶೇಷವಾಗಿ ಕನ್ನಡಪರ ಸಂಘಟನೆಗಳು ಕಲಾವಿದರ ಸಹಾಯಕ್ಕೆ ಬರಬೇಕೆಂದು ಬಿಎಸ್ಎಫ್ ಯೋಧ ದುರ್ಗಪ್ಪ ನಾಯಕ ಹಾಗೂ ರಮೇಶ ನಗನೂರ ಕರೆ ನೀಡಿದ್ದಾರೆ.