ವಿನಯ ವಿಶೇಷ

ಶ್ರಾವಣ ಮಾಸ ಯಾವ ರಾಶಿಗೆ ಶುಭಾಶುಭ ತಿಳಿಯಿರಿ

ಜ್ಯೋತಿಷ್ಯರು ಗಿರಿದರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕೆ ಇಂದೇ ಕರೆಮಾಡಿ.
9945098262

ಶ್ರಾವಣ ಮಾಸದ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.

ಮೇಷ ರಾಶಿ
ಕೇಂದ್ರದಲ್ಲಿರುವ ಬುಧ, ಶುಕ್ರ ಮತ್ತು ನವಮದಲ್ಲಿ ಶನಿ, ಕೇತು ಶುಭ ವಾಗಿದ್ದು ಚತುರ್ಥ ಸ್ಥಾನದಲ್ಲಿ ರವಿ ಪಂಚಮದಲ್ಲಿ ಕುಜ ಮತ್ತು ಅಷ್ಟಮಗುರು ಅಶುಭನಾಗಿದ್ದಾನೆ. ಸಮಸ್ಯೆಗಳನ್ನು ಆಲಸ್ಯದಿಂದ ಸ್ವೀಕರಿಸಬೇಡಿ ಇದು ನಿಮಗೆ ಅಪಾಯ ತಂದೊಡ್ಡುತ್ತದೆ. ವ್ಯವಹಾರಗಳಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಆದಷ್ಟು ನಿಮ್ಮ ಬುದ್ಧಿಶಕ್ತಿಯನ್ನು ಕಾರ್ಯಗಳಲ್ಲಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸುವುದು ಸೂಕ್ತ. ಕೆಲಸದಲ್ಲಿ ಬದಲಾವಣೆಯನ್ನು ಬಯಸುತ್ತಿದ್ದರೆ ಈ ಕ್ಷಣಗಳಲ್ಲಿ ಬೇಡ. ದಿನನಿತ್ಯದ ಆಯವ್ಯಯ ಸಮಸ್ಯೆಗಳಿಲ್ಲದೆ ನಡೆಯಲಿದೆ.
ಶುಭದಿನ 3 8 16 24 30 31
ಗಿರಿಧರ ಶರ್ಮ 9945098262

ವೃಷಭ ರಾಶಿ
ತೃತೀಯ ರವಿ, ಬುಧ, ಶುಕ್ರ ಹಾಗೂ ಕೇಂದ್ರದ ಗುರು ಶುಭದಾಯಕನಾಗಿದ್ದು. ಚತುರ್ಥ ಸ್ಥಾನ ಅಷ್ಟಮ ಶನಿ, ಕೇತು ಅಶುಭನಾಗಿದ್ದಾನೆ. ಉದ್ಯೋಗದಲ್ಲಿ ಸಹವರ್ತಿಗಳಿಂದ ಉತ್ತಮ ವಾತಾವರಣ ಇರಲಿದೆ. ಹಳೆಯ ಪಾವತಿಗಳನ್ನು ವಸೂಲಿ ಮಾಡಿಕೊಳ್ಳುವಿರಿ. ಕಳೆದುಹೋಗಿರುವ ವಸ್ತುಗಳು ನಿಮ್ಮ ಕೈಸೇರಲಿದೆ. ವ್ಯಾಪಾರ-ವ್ಯವಹಾರಗಳಲ್ಲಿ ಬೆಳವಣಿಗೆ ಕಂಡು ಬರುತ್ತದೆ. ಹಣಕಾಸಿನ ವ್ಯವಹಾರಗಳು ಲಾಭಾಂಶದಿಂದ ಕೂಡಿರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ವಿಷಯದಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆ ಕಾಣಬಹುದು.
ಶುಭದಿನ 5 10 14 19 20 27
ಗಿರಿಧರ ಶರ್ಮ 9945098262

ಮಿಥುನ ರಾಶಿ
ಕುಜ ಧನ ಸ್ಥಾನದ ಬುದ, ಶುಕ್ರ ಶುಭ ವಾಗಿದ್ದು ದ್ವಿತೀಯ ರವಿ, ಶನಿ, ಕೇತು ಮತ್ತು ಜನ್ಮಸ್ಥಾನ ರಾಹು ಅಶುಭ ನಾಗಿದ್ದಾನೆ. ಗೌರವಾದರಗಳು ನಿಮಗೆ ಮಾಡುವ ಕೆಲಸದಿಂದ ಸಿಗಲಿದೆ. ನಿಮ್ಮ ಕಾರ್ಯಗಳಿಗೆ ಮನ್ನಣೆ ದೊರೆಯುವುದು ನಿಶ್ಚಿತ. ವ್ಯಾವಹಾರಿಕ ಕ್ಷೇತ್ರಗಳಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಆದಾಯ ಗಳಿಕೆ ಸ್ಥಿರತೆಯಿಂದ ಕೂಡಿರುತ್ತದೆ. ಕೆಲಸದ ಸ್ಥಳದಲ್ಲಿ ಉಲ್ಲಾಸದ ವಾತಾವರಣ ಕಾಣಬಹುದು. ಇಷ್ಟಪಟ್ಟ ವಿಷಯಗಳಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇದೆ. ಗಣ್ಯವ್ಯಕ್ತಿಗಳ ಸಂಪರ್ಕ ಹೆಚ್ಚಾಗಲಿದೆ.
ಶುಭದಿನ 1 8 11 16 21 28
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಬುಧ, ಶುಕ್ರ, ಶನಿ, ಕೇತು ಮತ್ತು ಗುರು ಶುಭ ವಾಗಿದ್ದು. ಲಗ್ನ ಸ್ಥಾನ, ಧನಸ್ಥಾನ ಹಾಗೂ ಲಾಭ ಸ್ಥಾನದಲ್ಲಿರುವ ರವಿ ಕುಜ ರಾಹು ಅಶುಭ ದಾಯಕ ನಾಗಿದ್ದಾನೆ. ಹಣಕಾಸಿನ ವ್ಯವಹಾರ ಉತ್ತಮವಾಗಿ ನಡೆಯಲಿದೆ. ಯೋಜನೆಗಳಲ್ಲಿ ನಿರಾಸಕ್ತಿ, ಅಲಕ್ಷತನ ಕಾಣಬಹುದು. ಹೊಸ ಕಾರ್ಯಕ್ರಮಗಳನ್ನು ಹಾಗೂ ಶೈಕ್ಷಣಿಕ ಉನ್ನತ ಅಧ್ಯಯನ ಮತ್ತು ಕೆಲಸದ ವಿಷಯವಾಗಿ ಹೆಚ್ಚಿನ ಪರಿಶ್ರಮ ಕಂಡುಬರುತ್ತದೆ. ಕುಟುಂಬದಿಂದ ನಿಮ್ಮ ಯೋಜನೆಗಳಿಗೆ ಅಡೆತಡೆ ಉಂಟಾಗುವ ಸಾಧ್ಯತೆ ಇದೆ.
ಶುಭದಿನ 3 10 15 20 25 30
ಗಿರಿಧರ ಶರ್ಮ 9945098262

ಸಿಂಹ ರಾಶಿ
ಗುರು ಹಾಗೂ ರಾಹು ಶುಭಕರವಾಗಿದ್ದು, ಕುಜ, ಶನಿ, ರವಿ, ಬುಧ, ಶುಕ್ರ ಅಶುಭ ರಾಗಿದ್ದಾರೆ. ಕೆಲಸದಲ್ಲಿ ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ಆದಾಯ ಗಳಿಕೆಯಲ್ಲಿ ಸಂತೃಪ್ತಿಯ ಭಾವನೆ ಮೂಡುತ್ತದೆ. ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಮಾಡಲು ಮುಂದಾಗುತ್ತೀರಿ. ಹೂಡಿಕೆಗಳಲ್ಲಿ ಲಾಭದಾಯಕ ಅಂಶಗಳು ಕಾಣಬಹುದು. ಕೆಲಸದಲ್ಲಿ ಆಧುನಿಕತೆಗಳನ್ನು ಬಳಸಿಕೊಳ್ಳುವಿರಿ. ನಿಮ್ಮ ಉದ್ಯಮವನ್ನು ವಿಸ್ತರಣೆ ಮಾಡಿಕೊಳ್ಳಲು ಸಫಲರಾಗುತ್ತೀರಿ.
ಶುಭದಿನ 5 11 12 17 22 27
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಗುರು, ರವಿ, ಬುಧ, ಶುಕ್ರ ಶುಭಕರವಾಗಿದ್ದು ಚತುರ್ಥ ಸ್ಥಾನದಲ್ಲಿ ಶನಿ, ಕೇತು, ಕುಜ, ರಾಹು ಅಶುಭನಾಗಿದ್ದಾನೆ. ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಖರೀದಿ ಪ್ರಕ್ರಿಯೆಗಳು ಉತ್ತಮವಾಗಿ ನಡೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿ ಬಂಡವಾಳದ ಸಮಸ್ಯೆ ಉಲ್ಬಣವಾಗುತ್ತದೆ. ಸಾಲಪಾವತಿ ಕಠಿಣ ವಾಗುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕ ವ್ಯವಹಾರಗಳಲ್ಲಿ ಹಿನ್ನಡೆ ಆಗಲಿದೆ.
ಶುಭದಿನ 1 8 15 20 25 29
ಗಿರಿಧರ ಶರ್ಮ 9945098262

ತುಲಾ ರಾಶಿ
ಶನಿ, ಕೇತು, ಬುಧ, ಶುಕ್ರ ನವಮ ಸ್ಥಾನ ರಾಹು, ಲಾಭ ಸ್ಥಾನ ಕುಜ ಶುಭಕರನಾಗಿದ್ದು, ಗುರು ಮತ್ತು ರವಿ ಅಶುಭದಾಯಕ ಫಲವನ್ನು ನೀಡಬಹುದು. ಕೆಲಸದ ವಿಷಯವಾಗಿ ಹೆಚ್ಚಿನ ಅಲೆದಾಟ ಕಾಣಬಹುದು. ಕುಟುಂಬದಲ್ಲಿ ನೀಡಿರುವ ಜವಾಬ್ದಾರಿಯನ್ನು ಪೂರೈಸುತ್ತೀರಿ. ಉದ್ಯೋಗದಲ್ಲಿ ಉತ್ತಮ ಕಾರ್ಯಗಳಿಂದ ಅಧಿಕಾರಿಗಳ ಮನವನ್ನು ಗೆಲ್ಲುತ್ತೀರಿ. ಆರ್ಥಿಕ ವ್ಯವಹಾರದಲ್ಲಿ ಉತ್ತಮ ಸಾಧನೆಯಾಗಲಿದೆ. ಸಹವರ್ತಿಗಳು ನಿಮ್ಮ ಇಚ್ಛೆಯಂತೆ ನಡೆದುಕೊಳ್ಳುವರು. ನಿಮ್ಮ ಸ್ವಂತ ಆಲೋಚನೆಯಿಂದ ಮೂಡುವ ಕಾರ್ಯವು ಲಾಭ ತಂದುಕೊಡುತ್ತದೆ. ಆರೋಗ್ಯದ ಕಡೆಗೆ ಮುತುವರ್ಜಿ ವಹಿಸುವುದು ಸೂಕ್ತ.
ಶುಭದಿನ 3 9 16 21 26 30
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ನವಮ ಸ್ಥಾನದಲ್ಲಿ ರವಿ, ಬುದ, ಶುಕ್ರ ಹಾಗೂ ಜನ್ಮದಲ್ಲಿ ಗುರು ಶುಭಫಲಗಳನ್ನು ನೀಡಲಿದ್ದಾನೆ. ಧನ ಸ್ಥಾನದ ಶನಿ, ಕೇತು, ಅಷ್ಟಮ ಸ್ಥಾನ ರಾಹು ಮತ್ತು ಕರ್ಮಸ್ಥಾನ ಕುಜ ಅಶುಭ ಫಲಗಳನ್ನು ನೀಡಲಿದ್ದಾನೆ. ನಿಮ್ಮ ಯೋಜನೆಯನ್ನು ಪೂರ್ಣಗೊಳಿಸುತ್ತೀರಿ. ವ್ಯವಹಾರಗಳಲ್ಲಿ ಉತ್ತಮ ನಿರ್ವಹಣೆ ಕಾಣಬಹುದು. ಕೆಲಸದ ವಿಷಯವಾಗಿ ಗೌರವ ಸಿಗಲಿದೆ. ಸ್ವಂತ ಉದ್ಯೋಗದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಧೈರ್ಯೆ ಸಾಹಸೇ ಲಕ್ಷ್ಮಿ, ಎಂಬಂತೆ ನಿಮ್ಮ ಚಟುವಟಿಕೆಗಳು ಸಾಧನ ಶೀಲತೆಯಿಂದ ಮಹತ್ವದ ಆಕಾಂಕ್ಷೆಗಳನ್ನು ಆರಿಸಿಕೊಳ್ಳುತ್ತೀರಿ. ವ್ಯಾಪಾರಿಗಳಿಗೆ ಒಂದಷ್ಟು ಲಾಭ ಕಡಿಮೆಯಾಗಬಹುದು. ಶೈಕ್ಷಣಿಕ ಅಧ್ಯಯನದಲ್ಲಿ ಪ್ರಗತಿ ಕಂಡುಬರುತ್ತದೆ.
ಶುಭದಿನ 1 11 12 19 20 28
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಶನಿ, ಕೇತು ಅಷ್ಟಮ ರವಿ, ಬುದ, ಶುಕ್ರ ಸಪ್ತಮ ಭಾವದ ರಾಹು ಮತ್ತು ದ್ವಾದಶ ಸ್ಥಾನದ ಗುರು ಅಶುಭಫಲವನ್ನು ನೀಡಲಿದ್ದು. ಭಾಗ್ಯಸ್ಥಾನದ ಕುಜ ಶುಭಫಲಗಳನ್ನು ನೀಡಲಿದ್ದಾನೆ. ನಿಮ್ಮ ಉನ್ನತ ನಿಲುವುಗಳು ಉತ್ತಮ ಆದಾಯ ತಂದು ಕೊಡುತ್ತದೆ ಹಾಗೂ ಹಣಕಾಸಿನ ಯಾವುದೇ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲಿದೆ. ನಿಮ್ಮ ಹಳೆಯ ಸಂಕಷ್ಟ ಗಳೆಲ್ಲವೂ ದೂರವಾಗುವ ಸಾಧ್ಯತೆ ಕಂಡುಬರುತ್ತದೆ. ಹಿರಿಯ ವ್ಯಕ್ತಿಗಳೊಂದಿಗೆ ಕದನ, ಕಲಹದಂತಹ ಘಟನೆಗಳು ಸಂಭವಿಸಬಹುದು. ವಿವಾಹಕ್ಕೆ ಯೋಗ್ಯವಾದ ಬಾಳಸಂಗಾತಿಯನ್ನು ಆಯ್ದುಕೊಳ್ಳುವಿರಿ. ಖರ್ಚುಗಳು ವಿಪರಿತ ಹೆಚ್ಚಾಗಲಿದೆ. ಸಾಲಗಳನ್ನು ತೀರಿಸುವ ಚಿಂತನೆ ನಡೆಯಲಿದೆ.
ಶುಭದಿನ 3 8 15 22 26 30
ಗಿರಿಧರ ಶರ್ಮ 9945098262

ಮಕರ ರಾಶಿ
ಲಾಭ ಸ್ಥಾನದ ಗುರು ಸಪ್ತಮದ ಬುದ, ಶುಕ್ರ ಶುಭಫಲಗಳನ್ನು ನೀಡಲಿದ್ದಾರೆ. ದ್ವಾದಶ ಸ್ಥಾನದ ಶನಿ, ಕೇತು ಅಷ್ಟಮ ಕುಜ ಆರನೇ ಸ್ಥಾನದ ರಾಹು ಹಾಗೂ ರವಿ ಅಶುಭ ಫಲಗಳನ್ನು ನೀಡಲಿದ್ದಾರೆ. ಕಷ್ಟನಷ್ಟಗಳು ಹೆಚ್ಚಾಗಲಿದೆ. ನಿಮ್ಮ ಆತ್ಮ ಬಲ ದ್ವಿಗುಣಗೊಳಲ್ಲಿದೆ. ನವೀನ ಕಲ್ಪನೆಗಳು ಸಕಾರಗೊಳ್ಳುತ್ತದೆ. ಕೆಲಸದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಯಿದೆ. ವಿದೇಶ ಪ್ರಯಾಣದ ಮುನ್ಸೂಚನೆ ಕಾಣಬಹುದು. ಧಾರ್ಮಿಕ ಕ್ರಿಯಾವಿಧಿಗಳಲ್ಲಿ ಪಾಲ್ಗೊಳ್ಳುವಿರಿ. ಖರ್ಚುಗಳು ವಿಪರಿತ ಹೆಚ್ಚಾಗಲಿದೆ.
ಶುಭದಿನ 1.9 16 24 28 29
ಗಿರಿಧರ ಶರ್ಮ 9945098262

ಕುಂಭ ರಾಶಿ
ಕರ್ಮ ಗುರು ಏಕಾದಶ ಶನಿ, ಕೇತು ಶುಭವಾಗಿದ್ದು. ಆರನೇ ಸ್ಥಾನದ ಬುಧ, ರವಿ, ಶುಕ್ರ, ಪಂಚಮ ರಾಹು ಹಾಗೂ ಕಳತ್ರ ಕುಜ ಅಶುಭರಾಗಿದ್ದಾರೆ. ನಿಮ್ಮ ವೃತ್ತಿಪರತೆ ಹಾಗೂ ಸೈದ್ಧಾಂತಿಕ ನಿಲುವುಗಳು ಇತರರಿಗೆ ಭರವಸೆ ಮೂಡಿಸಲಿದೆ. ಆತ್ಮೀಯ ವರ್ಗದಲ್ಲಿ ಪ್ರೇಮ ವೃದ್ಧಿಯಾಗುತ್ತದೆ. ಉದ್ಯೋಗಗಳಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ಮನಸ್ಸಿನ ಆಕಾಂಕ್ಷೆಗಳು ಸದ್ಯದಲ್ಲೇ ಈಡೇರಲಿದೆ. ಹೆಚ್ಚಿನ ಹಣಕಾಸು ಖರ್ಚು ಮಾಡುವುದು ಮುತ್ತು ನೀವು ಸಾಲ ಪಡೆದಿದ್ದಲ್ಲಿ ಸಾಲಗಾರರ ಉಪಟಳ ಹೆಚ್ಚಾಗಲಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆ ಕಂಡು ಬರಲಿದೆ.
ಶುಭದಿನ 3 7 11 19 26 30
ಗಿರಿಧರ ಶರ್ಮ 9945098262

ಮೀನ ರಾಶಿ
ಗುರು, ಶುಕ್ರ, ಬುಧ ಶುಭದಾಯಕ ಫಲವನ್ನು ನೀಡಲಿದ್ದು. ರವಿ, ಕುಜ, ಕೇತು, ಶನಿ, ರಾಹು ಅಶುಭರಾಗಿದ್ದಾರೆ. ವ್ಯವಸ್ಥಿತ ತಂತ್ರಗಳಿಂದ ಕಾರ್ಯಗಳಲ್ಲಿ ಉತ್ತಮ ಮಟ್ಟದ ಸಾಧನೆ ಮಾಡಲಿದ್ದೀರಿ. ವ್ಯಾಜ್ಯಗಳನ್ನು ಪರಸ್ಪರ ರಾಜಿ ಮೂಲಕ ಬಗೆಹರಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಹಟಮಾರಿತನದ ಸ್ವಭಾವವನ್ನು ಆದಷ್ಟು ತೆಗೆದುಹಾಕಿ. ಲೇವಾದೇವಿ ವ್ಯವಹಾರಗಳು ನಷ್ಟ ತರುವ ಸಾಧ್ಯತೆ ಇದೆ. ನಿಮ್ಮಲ್ಲಿ ಮೂಡುವ ಅಹಂಕಾರದ ವರ್ತನೆಯನ್ನು ತಡೆಹಿಡಿಯುವುದು ಸೂಕ್ತ. ಕೆಲವರು ನಿಮ್ಮ ಬಗ್ಗೆ ಅಪಪ್ರಚಾರ ಮಾಡಬಹುದು ಅವುಗಳಿಗೆ ಬೆಲೆ ನೀಡಬೇಡಿ.
ಶುಭದಿನ 1 5 10 15 22 28
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ಹಣಕಾಸು, ಸಾಲಭಾದೆ ಇನ್ನಿತರ ಗುಪ್ತ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ನಿಮ್ಮ ಒಂದು ಕರೆ ಕತ್ತಲಿನಿಂದ ಬೆಳಕಿನಡೆಗೆ ಸಾಗಬಹುದು.
9945098262

Related Articles

Leave a Reply

Your email address will not be published. Required fields are marked *

Back to top button