ಈ ಗುಲಾಬಿ ಹೂ ನಿನಗಾಗಿ..’ಹಿಂದಿರುಗಿದಾಗ’ ಕಾದಂಬರಿ ಭಾಗ-10
ಎಲ್ಲಿಹಿದು ಆ..ಗುಲಾಬಿ ಹೂ..
‘ಹಿಂದಿರುಗಿದಾಗ’ ಪಾಟೀಲರ ಕಾದಂಬರಿ ಭಾಗ-10
ದೇಸಾಯಿಯವರ ಮನೆ ಮಾಳಿಗೆಯ ಮೇಲೆ ಒಂದು ಉದ್ದನೆಯ ಕಂಬ ನೆಟ್ಟು, ಸುತ್ತಲೂ ಕಬ್ಬಿಣದ ತಂತಿಯಿಂದ ಅವರ ಆಳುಗಳು ಬಿಗಿದು ಕಟ್ಟುತ್ತಿದ್ದರು. ಕಂಬದ ತುದಿಯಲ್ಲಿ ಒಂದು ಅಡ್ಡವಾಗಿ ಗಿಲಿಟಿನ ಸಾಮಾನು ಇತ್ತು. ನಾವೆಲ್ಲರೂ ಏನಿರಬಹುದೆಂದು ಅವರ ಮನೆಯತ್ತ ಓಡಿದೇವು. ಕಾವ್ಯ ಖುಷಿಯಿಂದ ಮನೆಯಂಗಳದಲ್ಲಿ ನಮ್ಮನ್ನು ನೋಡಿ ಓಡಿ ಬಂದು ನಾವು ಟಿ.ವಿ.ತಂದೀವಿ, ಇವತ್ತು ನಾಕ ಗಂಟ್ಯಾಕ ಪಿಚ್ಯ್ಚಾರ ಆದ ಎಂದಳು. ಮನೆಯ ಮುಂದೆ ಜಾತ್ರೆಯಂತೆ ಜನ ಸೇರಿತ್ತು.
ನಮ್ಮ ಊರಿಗೆ ಕಾಲಿಟ್ಟ ಕಪ್ಪು -ಬಿಳುಪಿನ ದೂರದರ್ಶನ ಅದಾಗಿತ್ತು. ನಮ್ಮ ಗ್ರಾಮದ ತುಂಬೆಲ್ಲ ಟಿ.ವಿ.ಯದೆ ಮಾತು. ಮಾಳಿಗೆ ಮೇಲಿನ ಯಾಂಟಿನಕ್ಕೆ ವೈಯರ್‍ನಿಂದ ಮನೆಯೊಳಗಿನ ದೂರದರ್ಶನಕ್ಕೆ ಸಂಪರ್ಕ ಕಲ್ಪಿಸಲಾಯಿತು. ದೂರದರ್ಶನದ ಗುಂಡಿಗಳನ್ನು ಒತ್ತಿದರು. ತೆರೆಯ ಮೇಲೆ ಚಿತ್ರ ಮೂಡ ತೊಡಗಿದವು. ವಿದ್ಯುತ್ ಕಡಿತವಾಗಿ ದೂರದರ್ಶನ ಮುಖದ ಮೇಲಿನ ಚಿತ್ರಗಳು ಮಾಯವಾದವು.
ಎಲ್ಲರಿಗೂ ನಿರಾಸೆಯಾಯಿತು. ಕಾವ್ಯ ನಮ್ಮ ಗುಂಪಿನವರಿಗೆ ಅವರ ತೋಟದಲ್ಲಿ ತಂದ ಪೇರು ಹಣ್ಣುಗಳನ್ನು ಕೊಟ್ಟಳು. ನಾವು ಪೇರು ಹಣ್ಣುಗಳನ್ನು ತಿನ್ನುತ್ತಾ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತೇವು. ನಾಲ್ಕು ಗಂಟೆಯ ಸುಮಾರಿಗೆ ವಿದ್ಯುತ್ ಬಂದಿತ್ತು. ನಾವು ದೇಸಾಯಿಯವರ ಮನೆಯತ್ತ ಓಡಿದೇವು. ಶಿವಲಿಂಗ ದೇಸಾಯಿಯವರು ಮನೆಯ ಅಂಗಳದಲ್ಲಿ ಒಂದು ಕಬ್ಬಿಣದ ಕುರ್ಚಿ ಹಾಕಿಸಿ, ಅದರ ಮೇಲೆ ದೂರದರ್ಶನದ ಪೆಟ್ಟಿಗೆಯನ್ನು ಇಟ್ಟರು.
ಮನೆಯಲ್ಲಿ ಎಲ್ಲರೂ ಕುಳಿತು ನೋಡಲು ಇಕ್ಕಟ್ಟಾಗಿರಬಾರದೆಂದು ಈ ವ್ಯವಸ್ಥೆ ಮಾಡಿದ್ದರು. ಹೊಲದ ಕೆಲಸಗಳಿಗೆ ಹೋದವರು ಇನ್ನೂ ಮನೆಗೆ ಮರಳಿರಲಿಲ್ಲ. ಆದರೂ ಅವರ ಅಂಗಳದಲ್ಲಿ ಜನ ಸೇರಿತ್ತು. ನಮ್ಮ ಗುಂಪು ದೂರದರ್ಶನದ ಪೆಟ್ಟಿಗೆಯ ಮುಂಭಾಗದಲ್ಲಿ ಸ್ಥಾನ ಗಿಟ್ಟಿಸಿದೇವು. ದೇಸಾಯಿಯವರು ಒಂದೆರೆಡು ಗುಂಡಿಗಳನ್ನು ಒತ್ತಿದರು. ದೂರದರ್ಶನದಲ್ಲಿ ಚಿತ್ರಗಳು ಬರಲು ಪ್ರಾರಂಭಿಸಿದವು. ದೇಸಾಯಿಯವರು ಒಂದು ಗುಂಡಿಯನ್ನು ಹಿಂಡಿ ಧ್ವನಿಯನ್ನು ಹೆಚ್ಚಿಸಿದರು.
ಡಾ. ರಾಜಕುಮಾರ ಅಭಿನಯದ “ಅನುರಾಗ ಅರಳಿತು” ಚಲನ ಚಿತ್ರ ಬಿತ್ತರಗೊಂಡಿತು. ಅಂದಿನಿಂದ ರವಿವಾರಕ್ಕೊಮ್ಮೆ ನಾಲ್ಕು ಗಂಟೆಗೆ ದೂರದರ್ಶನ ಚಂದನದಲ್ಲಿ ಮೂಡಿ ಬರುವ ಚಿತ್ರ ನೋಡುವುದು ನಮ್ಮ ವಾಡಿಕೆಯಾಯಿತು. ಅದರೊಂದಿಗೆ ಕೋಗಿಲೆಯ ದನಿಯು ಚೆಲುವಿನ ಗಣಿಯಾದ ಕಾವ್ಯಳ ನೋಡುವುದು ಸೇರಿತ್ತು.ಮುಂಗಾರು ಮಳೆ ಚೆನ್ನಾಗಿ ಬಿದ್ದಿದ್ದರಿಂದ, ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭವಾಗಿತ್ತು. ಬೇಸಿಗೆಯಲ್ಲಿ ಸುರಿದ ಅವಘಡದ ಮಳೆಯ ಹಸಿಯಿಂದ ನೇಗಿಲು ಹೂಡಿ, ಕುಂಟೆಯಿಂದ ಹರಗಿದ್ದರು.
ನಂತರ ದಿನಗಳಲ್ಲಿ ಬೇಸಿಗೆಯಲ್ಲಿ ಮಣ್ಣು ಬಿಸಿಲು ತಿಂದಿತ್ತು. ಈ ಮಾಗಿ ಉಳುಮೆಯಿಂದ ನೆಲದಲ್ಲಿ ಸುಪ್ತಾವಸ್ಥೆಯಲ್ಲಿರುವ ಕೀಟಗಳನ್ನು ನಾಶಪಡಿಸುವುದು ವೈಜ್ಞಾನಿಕ ಉದ್ದೇಶವಾಗಿರವುದರಿಂದ ಇದನ್ನು ಅರಿಯದ ರೈತರು ತಮ್ಮ ಸಂಪ್ರದಾಯದಂತೆ ಮಾಗಿ ಉಳುಮೆ ಮಾಡಿದ್ದರು. ಹದವದ ಭೂಮಿ ಸುರಿದ ಮಳೆಹನಿಗಳನ್ನು ಹರಿದು ಮುಂದೆ ಹೋಗದಂತೆ, ತನ್ನ ಒಡಲೊಳಗೆ ಅಡಗಿಸಿಕೊಂಡಿತು.
ಮಳೆ ಪ್ರಾರಂಭವಾಗುವ ಮೊದಲೆ ಗ್ರಾಮದ ಸಂಪ್ರದಾಯದಂತೆ ಗ್ರಾಮ ಆರಾಧ್ಯ ದೈವಗಳನ್ನು ಪೂಜಿಸಿದ್ದರು. ಶನಿವಾರದಂದು ಗ್ರಾಮದ ಹೊರಬಯಲಿನಲ್ಲಿರುವ ಹನುಮಂತ ದೇವರ ಸಮಾರಾಧನೆ, ಎಲಿ ಪೂಜೆಯನ್ನು ಆಚಾರಿಯನ್ನು ಕರೆಸಿ, ಅವನಿಂದ ಗ್ರಾಮದ ದೈವದವರೆಲ್ಲ ಕೂಡಿ ಪೂಜೆ ಮಾಡಿಸಿದರು. ಮಂಗಳವಾರದಂದು ಗ್ರಮ ದೇವತೆ ದ್ಯಾವಮ್ಮ ಮತ್ತು ಅವಳ ಸಹೋದರಿಯರಾದ ಕೆಂಚಮ್ಮ, ಮರೆಮ್ಮ,ಪಾಲಕಮ್ಮ ದೇವತೆಗಳ ಉಡಿ ತುಂಬಿದರು. ಮುಂಗಾರು ಮಳೆಯೂ ಬಂದೆ ಬಿಟ್ಟಿತು.
ಮಳೆ ಬಂದ ಮರುದಿನವೆ ಗ್ರಾಮದ ಹಿರೇ ಕುರುಬ ಕೂರಿಗೆ ಪೂಜೆ ಮಾಡಿ, ಬಿತ್ತನೆಗೆ ಮೊದಲು ಮಾಡಿದ ಮೇಲೆ ಗ್ರಾಮದ ರೈತರೆಲ್ಲ ಬಿತ್ತನೆ ಮಾಡಬೇಕು. ಇದು ಹಿಂದಿನಿಂದ ಬಂದ ಸಂಪ್ರದಾಯ ರೈತರು ಮನೆಯ ಮುಂದೆ ಮೂಡಣ ದಿಕ್ಕಿಗೆ ಕೂರಿಗೆ ನಿಲ್ಲಿಸಿ, ಸೀರೆಕುಪ್ಪಸ ತೊಡಿಸಿ, ಬಳೆ ಆಭರಣಗಳನ್ನು ಹಾಕಿ, ಮಲ್ಲಗೆನೆನೆದಂಡೆ ಕಟ್ಟಿ , ಹುಡಿ ತುಂಬಿ,ಶ್ಯಾವಿಗೆ ನೈವಿಧ್ಯದ ಎಡೆ ಹಿಡಿದುಮನೆಯ ಮಂದಿಯೆಲ್ಲ ನಮಸ್ಕರಿಸಿ, ಊಟ ಮಾಡಿ, ರೈತರು ಕಂಬಳಿಯ ಟೊಪ್ಪಿಗೆಯನ್ನು ತೆರೆಮೇಲೆ ಧರಿಸಿ, ಮಧುವಣಗಿತ್ತಿಯಂತೆ ಸಿಂಗಾರಗೊಂಡ ಕೂರಿಗೆಯನ್ನು ಹೇಗಲ ಮೇಲೆ ಹೊತ್ತು ಸಾಗುತ್ತಾರೆ. ಸಂಗ್ರಹಿಸಿಟ್ಟ ಬೀಜಗಳನ್ನು ಹೊಲದಲ್ಲಿ ಬಿತ್ತನೆ ಮಾಡುತ್ತಾರೆ.
ನಮ್ಮ ಪ್ರದೇಶವು ಕೆಂಪು ಮಣ್ಣಿನಿಂದ ಕೂಡಿರುವದರಿಂದ ಮಳೆಯು ತುಂಬಾ ಪ್ರಮಾಣದಲ್ಲಿ ಬೇಕಾಗುವುದು. ಸ್ವಲ್ಪ ಮಳೆಯಾದರೂ ಬೇಗ ಹಸಿಯಾಗಿ ಬೇಗನೆ ಒಣಗಿ ಬಿಡುತ್ತದೆ. ಕಪ್ಪು ಮಣ್ಣಿನಂತೆ ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ನಮ್ಮ ಮಣ್ಣಿಗೆ ಇರುವುದಿಲ್ಲ. ಮುಂಗಾರು ಹಂಗಾಮಿನಲ್ಲಿ ಹೆಸರು, ಸಜ್ಜೆ, ಶೇಂಗಾ, ತೊಗರಿ ಪ್ರಮುಖ ಬೆಳೆಗಳನ್ನು ಬೆಲೇದರೆ, ಮಿಶ್ರ ಬೆಳೆಯಾಗಿ ಈ ಪ್ರಮುಖ ಬೆಳಗಳ ಸಾಲಿನಲ್ಲೆ ಬಿಲೀ ಎಳಳು, ಕಾರೆಳ್ಳು, ಹಲಸಂದಿ, ಮಟಿಗೆ ಕಿರಾಣಿ ಧಾನ್ಯಗಳನ್ನು ಬೆಳೆಯುತ್ತಾರೆ, ಹಾಸು ಹೊಕ್ಕಾಗಿ ಪುಂಡಿಯನ್ನು ಬೆಳೆಯುತ್ತಾರೆ.
ಇದರ ತಪ್ಪಲು ತರಕಾರಿಯಾಗಿ ಉಪಯೋಗಿಸಲು ಸಹಕಾರಿಯಾಗುತ್ತದೆ. ನಮ್ಮ ಗುಂಪಿನ ಬಳಗದವರೆಲ್ಲ ಹೊಲಕ್ಕೆ ಹೋಗಿದ್ದರು. ಇಂದು ಅವರ ಹೊಲದಲ್ಲಿ ಬಿತ್ತನೆ ಕಾರ್ಯ ಆರಂಭವಾಗಿತ್ತು. ನಾನು ಮತ್ತು ಕಾವ್ಯಳನ್ನು ಬಿಟ್ಟರೆ, ನಮ್ಮ ಗುಂಪಿನವರು ಎಲ್ಲರೂ ಹೊಲದಲ್ಲಿ ಇದ್ದರು. ಅಂದು ವಿಶ್ರಾಂತಿಗೆ ಬಿಟ್ಟಾಗ ಶಾಲೆಯಿಂದ ಹೊರಬಂದು, ಒಂದು ಮಹತ್ವದ ಕಾರ್ಯಕ್ಕೆ ಮನಸ್ಸು ಮಾಡಿದೆ, ಚಲನಚಿತ್ರಗಳಲ್ಲಿ ನಾಯಕ ನಾಯಕಿಗೆ ಗುಲಾಬಿ ಹೂ ಕೊಡುವುದನ್ನು ನೋಡಿದ್ದೆ, ನಾನು ಕೂಡ ಕಾವ್ಯಳಿಗೆ ಗುಲಾಬಿ ಹೂವು.. (ಮುಂದುವರೆಯುವುದು..)
–ಶರಣಗೌಡ ಪಾಟೀಲ್ ಚಂದಾಪುರ.
ಲೇಖಕರು. ಶಹಾಪುರ.
Nimm katheya bagavu chennagi moodibaruttiddu namagella kushi koduttide, halli gala saundarya na heneyutturuva katheyu innu munduwareyalendu aashisuttene, sharan patilare ivattina nimma sanchikeyalli yatha prakara gramada aaradhya varnisuva nivu ondu vyakya heliruttiri enandare “male banda marudina gramada hirekuruba endu avalokisiiddira” yavade vyaktiya, swathaha mattu avar janangakke agourva toriddiri, dayavittu intaha gatane marukalisdante kaydukolli.
Desai avar magalu endu gourava dind torvaga maryade inda prkatisiruttira berw jatiya janarannu kilagi kanisi mattu ondu jangakke agourava toruvadu sukta walla endeneautade.