ದರೋಡೆ ಪ್ರಕರಣ ಬೇಧಿಸಿದ ಪೊಲೀಸರುಃ ಆರೋಪಿಗಳಿಬ್ಬರ ಬಂಧನ
ಲಾರಿ ಅಡ್ಡಗಟ್ಟಿ ದರೋಡೆಃ ಇಬ್ಬರ ಬಂಧನ
ಯಾದಗಿರಿಃ ಫೆ. 11 ರಂದು ಸಂಜೆ ಸಿಮೆಂಟ್ ತುಂಬಿದ ಲಾರಿಯೊಂದನ್ನು ಅಡ್ಡಗಟ್ಟಿ ಚಾಲಕ ಮತ್ತು ಕ್ಲೀನರ್ ನನ್ನು ಥಳಿಸಿ ಬೆದರಿಸಿ ಅವರಲ್ಲಿದ್ದ 47.200 ರೂಪಾಯಿ ದರೋಡೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ವಡಿಗೇರಾ ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಮೆಂಟ್ ಲೋಡ್ ಮಾಡಿಕೊಂಡು ಸೇಡಂನಿಂದ ಸಿಂಧನೂರಕ್ಕೆ ಯಾದಗಿರಿ-ಶಹಾಪುರ ಮಾರ್ಗವಾಗಿ ಹೋಗುತ್ತಿರುವಾಗ ಲಾರಿಯನ್ನು ತಡೆದು ಚಾಲಕ, ಕ್ಲೀನರ್ ಗೆ ಭಯವೊಡ್ಡಿ ಹಣ ಕಿತ್ತುಕೊಂಡು ಆರೋಪಿಗಳಿಬ್ಬರು ಪರಾರಿಯಾಗಿದ್ದರು ಎನ್ನಲಾಗಿದೆ.
ಘಟನೆ ನಂತರ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ಕೃತ್ಯಕ್ಕೆ ಬಳಸಿದ ಕಾರು ಸಂಖ್ಯೆ ಕೆಎ-53 ಎಂ.1981 ಸಹಿತ ಆರೋಪಿಗಳಾದ ಯಾದಗಿರಿಯ ಬಸವರಾಜ ಸಿಂಧೆ, ಸಂತೋಷ ತಳವಾರ ಚಟ್ನಳ್ಳಿ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಭೇಧಿಸಲು ಯಾದಗಿರಿ ಸಿಪಿಐ ಶರಣಗೌಡ, ವಡಿಗೇರಾ ಪಿಎಸ್ಐ ಸಿದ್ಧರಾಯ ಬಳ್ಳೂರಗಿ ನೇತೃತ್ವದ ತಂಡದ ಕಾರ್ಯ ಶ್ಲಾಘನೀಯವಾಗಿದೆ.