ಪ್ರಮುಖ ಸುದ್ದಿ
ಸಂಕ್ರಾಂತಿಗೆ ಸಿಹಿಃ 1869 ಕೋಟಿ 2 ನೇ ಕಂತು ನೆರೆ ಪರಿಹಾರ ಬಿಡುಗಡೆ
1869 ಕೋಟಿ 2 ನೇ ಕಂತು ನೆರೆ ಪರಿಹಾರ ಬಿಡುಗಡೆ
ನವದೆಹಲಿಃ ಕೇಂದ್ರ ಸರ್ಕಾರ ಇದೀಗ ರಾಜ್ಯಕ್ಕೆ ಎರಡನೇ ಕಂತಿನ ನೆರೆ ಪರಿಹಾರ ಬಿಡುಗಡೆ ಮಾಡುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದೆ.
ಮೊನ್ನೆ ಮೊನ್ನೆ ತುಮಕೂರ ಕಲ್ಪತರನಾಡಿಗೆ ಆಗಮಿಸಿದ್ದ ಪ್ರಧಾನಿ ಮೋದಿಯವರಿಗೆ ನಮ್ಮ ರಾಜ್ಯದ ಸಿಎಂ ಯಡಿಯೂರಪ್ಪ ವೇದಿಕೆ ಮೇಲೆಯೇ ನೆರೆ ಪರಿಹಾರ ಬೇಡಿಕೆ ಸಲ್ಲಿಸಿದ್ದರು.
ಈಗ ಕೇಂದ್ರ ಎರಡನೇ ಕಂತಿನ 1869.85 ಕೋಟಿ ರೂ. ಬಿಡುಗಡೆ ಅನುಮೋದನೆ ನೀಡಿದೆ. ಒಟ್ಟು ರಾಜ್ಯಕ್ಕೆ ಕೇಂದ್ರ ಸರ್ಕಾರ 3069 ಕೋಟಿ ರೂ.ಪರಿಹಾರ ನೀಡಿದಂತಾಗಿದೆ