ಪ್ರಮುಖ ಸುದ್ದಿ
ಕೊರೊನಾಗೆ ದೇಶದಲ್ಲಿಯೇ ಮೊದಲ ಡಿಸಿ ಬಲಿ.!?, ಸಾಮಾಜಿಕ ಜಾಲತಾಣ ಹರಿದಾಡುತ್ತಿರುವ ಸುದ್ದಿ
ಕೊರೊನಾಗೆ ದೇಶದಲ್ಲಿಯೇ ಮೊದಲ ಡಿಸಿ ಬಲಿ.!
ವಿವಿ ಡೆಸ್ಕ್ಃ ಕೊರೊನಾ ಮಹಾಮಾರಿ ತೀವ್ರತೆ ಹೆಚ್ಚಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಕೂಲಿಕಾರ್ಮಿಕರು ಬಡವರು ಶ್ರೀಮಂತರು ಎಂದು ಲೆಕ್ಕಿಸದ ಕೊರೊನಾ ಸಿಕ್ಕವರ ಮೈಯ ಹೊಕ್ಕಿ ಆಟವಾಡುತ್ತಿದೆ.
ಪಶ್ಚಿಮ ಬಂಗಾಲದ ಹೂಗ್ಲಿ ಜಿಲ್ಲೆ ಚಂದನನಗರ ವಿಭಾಗದ ಜಿಲ್ಲಾಧಿಕಾರಿಯಾಗಿದ್ದ ದೇಬದತ್ತ ರಾಯ್ ಅವರು ಕೊರೊನಾ ತಗುಲಿದ್ದು, ಚಿಕಿತ್ಸೆಗೆ ಸ್ಪಂಧಿಸದೆ ಇಂದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅಲ್ಲದೆ ಇದಕ್ಕೆ ಸಾಕ್ಷಿ ಎಂಬಂತೆ ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ ದೃಢಿಕರಿಸಿದ ಲೆಟರ್ ಸಹ ಎಲ್ಲಡೆ ಹರಿದಾಡುತ್ತಿದ್ದು ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ಪಡಿಸಬೇಕಿದೆ ಎಂದು ಹೇಳಲಾಗುತ್ತಿದೆ.